ಕಲ್ಲುಗುಂಡಿ:ಎಸ್ಸೆಸ್ಸೆಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಶಾಖೆ ವತಿಯಿಂದ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್, ವಿದ್ಯಾರ್ಥಿಗಳಿಗೆ ಉಚಿತ ಶಾಲಾ ನೋಟ್ ಬುಕ್ ವಿತರಣೆ ಮತ್ತು
ಐಸಿಎಫ್ ನಾಯಕರಿಗೆ ಸನ್ಮಾನ ಕಾರ್ಯಕ್ರಮ
ಕಲ್ಲುಗುಂಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಕಲ್ಲುಗುಂಡಿ, ಸಂಪಾಜೆ ಮತ್ತು ಕೊಯನಾಡು ಭಾಗದ ಸುಮಾರು ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ನೋಟ್ ಬುಕ್ ವಿತರಣೆ ನಡೆಸಲಾಯಿತು. ಸುನ್ನೀ ದಅವಾ ವಿಂಗ್ ವತಿಯಿಂದ ಎಲ್ಲಾ ಸಾಂತ್ವನ ಕಾರ್ಯಾಚರಣೆಗಳ ಸಲಹೆಗಾರರಾಗಿ ಕಾರ್ಯಾಚರಿಸುವ ಐಸಿಎಫ್ ನಾಯಕರಾದ ಅಬ್ದುಲ್ಲಾ ಸಂಪಾಜೆ ರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.