ಸುಳ್ಯ: ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಸುನ್ನಿ ಯುವಜನ ಸಂಘ ಹಾಗೂ ಎಸ್.ಕೆ.ಎಸ್.ಎಸ್.ಎಫ್ ತಾಲೂಕು ಘಟಕ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕಿನಿಂದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಎಸ್.ವೈ.ಎಫ್ ಸುಳ್ಯ ವಲಯದ
ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕತ್ತರ್ ನಿವೃತ್ತ ಕ್ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಇಸ್ಮಾಯಿಲ್ ಅಡಿಮರಡ್ಕ, ಹಸೈನಾರ್ ಅಡ್ಕ ಅಜ್ಜಾವರ, ಅಬ್ದುಲ್ ನಾಸಿರ್ ಕಟ್ಟೆಕ್ಕಾರ್, ಪೋಕರ್ ಕುಂಇ’ ಮಂಡೆಕೋಲು ಹಾಗೂ ಮುಸ್ತಪ ಡೆಲ್ಮಾ ಇವರಿಗೆ ಬೀಳ್ಕೊಡುವ ಸಮಾರಂಭವು ಸುಳ್ಯದ ಸುನ್ನಿ ಮಹಲ್ ನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಮೀದ್ ಹಾಜಿ ವಹಿಸಿದರು. ದುವಾವನ್ನು ಶಾಫಿ ಧಾರಿಮಿ ನೆರವೇರಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್ ಸುಳ್ಯ, ಅನ್ಸಾರಿಯ ಯತೀಮ್ ಖಾನ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಶುಭ ಹಾರೈಸಿದರು.
ಎ.ಪಿ.ಎಂ.ಸಿ ನಿರ್ದೇಶಕ ಹಾಜಿ ಆದಂ ಕಮ್ಮಾಡಿ, ತಾಜ್ ಮಹಮ್ಮದ್ ಸಂಪಾಜೆ, ಹಾಜಿ ಕೆ.ಎಂ ಅಬ್ದುಲ್ ಹಮೀದ್ ಜನತಾ, ಸುಳ್ಯ ತಾಲೂಕು ಜಮ್ಮೀಯುತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಉಮ್ಮರ್ ಕಟ್ಟೆಕ್ಕಾರ್, ಹಾಜಿ ಅಹಮ್ಮದ್ ಸುಪ್ರೀಮ್, ಹಸೈನಾರ್ ಧರ್ಮತ್ತಣಿ, ಅಬ್ದುಲ್ ಖಾದರ್ ಪಟೇಲ್, ಇಬ್ರಾಹಿಂ ಶಿಲ್ಪಾ, ಅಹಮ್ಮದ್ ಶಿಲ್ಪಾ, ಹಂಝಾ ಪೋಲಿಸ್ ಮೊದಲಾದವರು ಉಪಸ್ಥಿತರಿದ್ದರು. ಅಕ್ಬರ್ ಕರಾವಳಿ ಸ್ವಾಗತಿಸಿದರು. ಅಮೀರ್ ಕುಕ್ಕುಂಬಳ ವಂಧಿಸಿದರು. ಶಾಫಿ ಧಾರಿಮಿ ಕಾರ್ಯಕ್ರಮ ನಿರೂಪಿಸಿದರು.