ಮೈಸೂರು: ಮೈಸೂರಿನ ನಟರಾಜ ಮ್ಯೂಸಿಕ್ ಆಂಡ್ ಡಾನ್ಸ್ ಅಕಾಡಮಿ ನೀಡುವ ನಾಟ್ಯ ಕಲಾ ಪ್ರಶಸ್ತಿಗೆ ಖ್ಯಾತ ನೃತ್ಯ ಕಲಾವಿದೆ, ಭರತನಾಟ್ಯ ಗುರು ಡಾ.ಚೇತನಾ ರಾಧಾಕೃಷ್ಣ ಅವರು ಆಯ್ಕೆಯಾಗಿದ್ದಾರೆ.ಅ. 29ರಂದು ಮೈಸೂರಿನ ಶ್ರೀ ರಮಾ ಗೋವಿಂದ ಸಭಾಂಗಣದಲ್ಲಿ
ನಟರಾಜ ಮ್ಯೂಸಿಕ್ ಆಂಡ್ ಡಾನ್ಸ್ ಅಕಾಡಮಿ ವತಿಯಿಂದ ನಡೆಯುವ ಮೈಸೂರು ದಸರಾ ನೃತ್ಯೊತ್ಸವದಲ್ಲಿ ಭರತನಾಟ್ಯ ನಾಟ್ಯ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ.ಚೇತನಾ ರಾಧಾಕೃಷ್ಣ ಅವರು ಕನಕಮಜಲು ಮೂರ್ಜೆಯ ರಾಧಾಕೃಷ್ಣ ಅವರ ಪತ್ನಿ. ಮಂಡ್ಯ ಹಾಗೂ ಮೈಸೂರಿನ ಶ್ರೀ ಗುರುದೇವ ಲಲಿತ ಕಲಾ ಅಕಾಡೆಮಿಯ ನಿರ್ದೇಶಕರಾದ ಡಾ.ಚೇತನಾ ಖ್ಯಾತ ನೃತ್ಯ ಕಲಾವಿದರು ಹಾಗೂ ನೃತ್ಯ ಗುರುಗಳು.