ಸುಳ್ಯ;ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ರೀತಿಯಲ್ಲಿ ಮತ ಪಡೆಯಲಿದ್ದು ಬಿಜೆಪಿಯ ಬಹುಮತ ಝೀರೋಕ್ಕೆ ಇಳಿಯಲಿದೆ. ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದ್ದು
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಉತ್ತಮ ಅಂತರದಲ್ಲಿ
ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಸುಳ್ಯ ಕ್ಷೇತ್ರದ ಡಿಸಿಸಿ ಉಸ್ತುವಾರಿ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಎಲ್ಲಾ ಸಮುದಾಯದ ಜನರು, ದಲಿತರು, ಹಿಂದುಳಿದ ವರ್ಗದವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ. ಹಿಂದುಳಿದ ವರ್ಗ ಹಾಗೂ ದಲಿತರಿಗೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಸುಳ್ಯದಲ್ಲಿ 35 ವರ್ಷಗಳಿಂದ ಬಿಜೆಪಿ ಶಾಸಕರಿದ್ದರೂ ಒಂದು ಸಮುದಾಯ ಭವನ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಆಗಲಿಲ್ಲ.
33 ವರ್ಷಗಳ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದೆ.

ಬಿಜೆಪಿಯ ಭ್ರಮೆ ಈ ಬಾರಿ ಕಳಚಿ ಬೀಳಲಿದೆ.ಸೋಲಿನ ಭೀತಿಯಿಂದ ಹತಾಶರಾಗಿರುವ ಬಿಜೆಪಿಗರು ಇಲ್ಲ ಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ನ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವದರ ಜೊತೆಗೆ
ಇಂಡಿಯಾ ಒಕ್ಕೂಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದ್ದು ದೇಶದಲ್ಲಿ ದೊಡ್ಡ ರಾಜಕೀಯ ಬದಲಾವಣೆ ಆಗಲಿದೆ ಎಂದರು. ಸಂವಿಧಾನದ ಉಳಿವಿಗಾಗಿ, ರಾಷ್ಟ್ರದ ಐಕ್ಯತೆಯನ್ನು ಉಳಿಸುವ ಚುನಾವಣೆ ಇದಾಗಿದೆ. ಎಲ್ಲರನ್ನೂ ಸಮಾನಾಗಿ ಕಾಣುವ ಪಕ್ಷ ಕಾಂಗ್ರೆಸ್ ಹೆಣ್ಣು ಮಕ್ಕಳನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂಬುದು ಕಾಂಗ್ರೆಸ್ ಒತ್ತಾಯ ಎಂದರು.
ಪ್ರತಿ ಬೂತ್ನಲ್ಲಿ 100 ಮತ ಹೆಚ್ಚಳ:
ಕಾಂಗ್ರೆಸ್ ಅಭ್ಯರ್ಥಿಗೆ ಪ್ರತಿ ಬೂತ್ನಲ್ಲಿ 50 ರಿಂದ 100 ಮತ ಜಾಸ್ತಿ ಮಾಡುವ ಪ್ರಯತ್ನ ಮಾಡಿದ್ದೇವೆ. ಒಂದು ಹಂತದಲ್ಲಿ ಎಲ್ಲಾ ಮನೆಗಳನ್ನೂ ಸಂಪರ್ಕ ಮಾಡಲಾಗಿದೆ. ಎರಡನೇ ಹಂತದ ಪ್ರಚಾರ ಕಾರ್ಯ ಆರಂಭಿಸಿದೆ ಎಂದ ಜಯಪ್ರಕಾಶ್ ರೈ ಯಾರೂ ನೋಟಾ ಹಾಕಬೇಡಿ, ಕಾಂಗ್ರೆಸ್ಗೆ ಮತ ನೀಡಿ ಎಂದು ಅವರು ಕರೆ ನೀಡಿದರು.
ನಗರದಲ್ಲಿ ಸಮಸ್ಯೆಗಳ ಆಗರ- ಶಶಿಧರ ಎಂ.ಜೆ:
ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ ಮಾತನಾಡಿ ಸುಳ್ಯ ನಗರದಲ್ಲಿ
‘ಪೈಪ್ಲೈನ್ ಕಾಮಗಾರಿಯಿಂದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮನೆಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿದೆ. ನಗರದ ಎಲ್ಲಾ ಚರಂಡಿಗಳಲ್ಲಿ ಗಬ್ಬು ನಾರುತಿದೆ ಇಂದರಿಂದ ರೋಗ ಹರಡುವ ಆತಂಕ ಎದುರಾಗಿದೆ. ವಿದ್ಯುತ್ ಲೈಟ್ಗಳು ಉರಿಯತ್ತಿಲ್ಲ. ದೊಡ್ಡ ದೊಡ್ಡ ಹೈಮಾಸ್ಟ್ ದೀಪಗಳು ಮಾಯವಾಗಿದೆ. ಸುಳ್ಯದ ಮೀನು ಮಾರುಕಟ್ಟೆ ಸೊರಗಿದೆ. ಹೀಗ ಹಲವು ಜ್ವಲಂತ ಸಮಸ್ಯೆಗಳು ಇದೆ. ಆದುದರಿಂದ ಮತದಾನ ಮಾಡುವ ಮೊದಲು ಜನರು ಯೋಚನೆ ಮಾಡಬೇಕು. ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಬದಲಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಹೇಳಿದರು.
ರಾಜ್ಯದಲ್ಲಿ 20 ಸೀಟ್ನಲ್ಲಿ ಗೆಲುವು:ಕೆ.ಎಂ.ಮುಸ್ತಫ
ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಮಾತನಾಡಿ’ ಈ ಬಾರಿ ದ.ಕ.ಜಿಲ್ಲೆಯಲ್ಲಿ ಎಲ್ಲಾ ಜಾತ್ಯಾತೀತ ಪಕ್ಷಗಳು ಒಟ್ಟಾಗಿದ್ದೇವೆ. ಇದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಾಯಕವಾಗಲಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ 20ಕ್ಕೂ ಸೀಟ್ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ
ಎಸ್.ಸಂಶುದ್ದೀನ್, ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಸಹ ಸಂಚಾಲಕ ಕೆ.ಗೋಕುಲ್ದಾಸ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಭವಾನಿ ಶಂಕರ ಕಲ್ಮಡ್ಕ, ಕಾಂಗ್ರೆಸ್ ಮಾಧ್ಯಮ ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.