ಮೊಹಾಲಿ: ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಪರಾಭವಗೊಳಿಸಿತು. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟಿತು.ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 214 ರನ್ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ 18.5 ಓವರ್ಗಳಲ್ಲಿ 4 ವಿಕೆಟ್
ಕಳೆದುಕೊಂಡು 216 ರನ್ ಗಳಿಸಿತು. ಕ್ಯಾಮರಾನ್ ಗ್ರೀನ್ (23) ಹಾಗೂ ಇಶಾನ್ (75) 53 ರನ್ ಜೊತೆಯಾಟ ನೀಡಿದರು. ಗ್ರೀನ್ ವಿಕೆಟ್ ಪತನದ ಬಳಿಕ ಇಶಾನ್ಗೆ ಜೊತೆಯಾದ ಸೂರ್ಯ (66) 3ನೇ ವಿಕೆಟ್ಗೆ 55 ಎಸೆತಗಳಲ್ಲಿ 116 ರನ್ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಶಾನ್ ಆಟದಲ್ಲಿ ಏಳು ಬೌಂಡರಿ ನಾಲ್ಕು ಸಿಕ್ಸರ್ ಇದ್ದರೆ, ಸೂರ್ಯ ಎಂಟು ಬೌಂಡರಿ ಎರಡು ಸಿಕ್ಸರ್ ಸಿಡಿಸಿದರು.
ಕೊನೆಯಲ್ಲಿ ಟಿಮ್ ಡೇವಿಡ್ ಮತ್ತು ತಿಲಕ್ ವರ್ಮಾ ತಂಡವನ್ನು ಜಯದ ದಡ ಸೇರಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಪಂಜಾಬ್ ತಂಡವು ಬೃಹತ್ ಮೊತ್ತ ಪೇರಿಸಿತ್ತು. ಲಿಯಾಮ್ (ಅಜೇಯ 82; 42ಎ) ಮತ್ತು ಜಿತೇಶ್ (ಅಜೇಯ 49; 27ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಸೇರಿಸಿದರು. ನಾಯಕ ಶಿಖರ್ ಧವನ್ (30; 20ಎ) ಹಾಗೂ ಮ್ಯಾಥ್ಯೂ ಶಾರ್ಟ್ (27; 26ಎ) ಕೂಡ ಮೊತ್ತ ಹೆಚ್ಚಲು ಕಾರಣದಾದರು.