ಸುಳ್ಯ:ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನದ ಅಂಗವಾಗಿ ಸುಳ್ಯದಲ್ಲಿ ನಡೆಯುವ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ನೂತನ ಸಮಿತಿ ರಚಿಸಲಾಯಿತು. ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ
ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಂಬೆಕಲ್ಲು, ಕಾರ್ಯದರ್ಶಿಯಾಗಿ ಪ್ರಕಾಶ್ ಯಾದವ್ ಹಾಗೂ ಕೋಶಾಧಿಕಾರಿಯಾಗಿ ನವೀನ್ ಎಲಿಮಲೆ ಆಯ್ಕೆಯಾದರು.
ತೀರ್ಥರಾಮ ಅಂಬೆಕಲ್ಲು,ಪ್ರಕಾಶ್ ಯಾದವ್, ನವೀನ್ ಎಲಿಮಲೆ
ಉಪಾಧ್ಯಕ್ಷರಾಗಿ ಸುನೀಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲ್, ದೇವಿಪ್ರಸಾದ್ ಅತ್ಯಾಡಿ, ಸಹಕಾರ್ಯದರ್ಶಿಯಾಗಿ ಪಾರ್ವತಿ ಕುಂಚಡ್ಕ, ರಾಜೇಶ್ ಬೇರಿಕೆ, ವ್ಯವಸ್ಥಾ ಪ್ರಮುಖ್ ಆಗಿ ರಾಜೇಶ್ ಕಲ್ಲುಮುಟ್ಲು, ವಿನಯ ಪಾಡಾಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿಯ ಪ್ರಮುಖರು ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.