ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರು ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸುಳ್ಯ ತಾಲೂಕು ಪಂಚಾಯತ್ ಶಾಸಕರ ಕಚೇರಿಯಲ್ಲಿ ಭಾಗೀರಥಿ ಮುರುಳ್ಯ ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಹಕ್ಕುಪತ್ರ, ಪ್ಲಾಟಿಂಗ್, ಸರ್ವೆ ಸೇರಿದಂತೆ ವಿವಿಧ ವೈಯುಕ್ತಿಕ ಸಮಸ್ಯೆಗಳ ಬಗ್ಗೆ ಮತ್ತು
ರಸ್ತೆ, ವಿದ್ಯುತ್, ಕುಡಿಯುವ ನೀರು ಸಂಬಂಧಿಸಿ ವಿವಿಧ ಸಾರ್ವಜನಿಕ ವಿಷಯಗಳ ಬಗ್ಗೆ ಸಾರ್ಬಜನಿಕರು ಅಹವಾಲು ಸಲ್ಲಿಸಿದರು. ಸಾರ್ವಜನಿಕರ ವಿವಿಧ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಎನ್.ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು,ಪ್ರಮುಖರಾದ
ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಚನಿಯ ಕಲ್ತಡ್ಕ, ಮಹೇಶ್ ರೈ ಮೇನಾಲ, ಬಾಲಕೃಷ್ಣ ಕೀಲಾಡಿ, ದಯಾನಂದ ಕುರುಂಜಿ, ಶೇಖರ ಮಡ್ತಿಲ, ವಿಜಯ ಆಲಡ್ಕ, ವಸಂತ ನಡುಬೈಲು, ಬಾಬು ಜಾಲ್ಸೂರು, ಕುಶಾಲಪ್ಪ ಪೆರುವಾಜೆ, ಚಂದ್ರಶೇಖರ ನೆಡೀಲು ಮತ್ತಿತರರು ಉಪಸ್ಥಿತರಿದ್ದರು.