ಮುಂಬೈ: ರೋಹಿತ್ ಶರ್ಮ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ ಸ್ಪೋಟಕ ಅರ್ಧ ಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ 15.4 ಓವರ್ಗಳಲ್ಲಿ
ಒಂದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸಿಕ್ಸರ್, ಬೌಂಡರಿಗಳ ಸುರಿ ಮಳೆ ಸುರಿಸಿದ ರೋಹಿತ್ ಮತ್ತು ಸೂರ್ಯ ಮುರಿಯದ ಎರಡನೇ ವಿಕೆಟ್ಗೆ 54 ಎಸೆತಗಳಲ್ಲಿ 114ರನ್ ಬಾರಿಸಿ ಸುಲಭ ಜಯ ದಾಖಲಿಸಿದರು. ರೋಹಿತ್ ಶರ್ಮ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 76 ರನ್ ಗಳಿಸಿದರೆ ಸೂರ್ಯ ಕೇವಲ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 68 ರನ್ ಬಾರಿಸಿದರು.ರಿಕೆಲ್ಟನ್ 24 ರನ್ ಬಾರಿಸಿದರು.
ಚೆನ್ನೈ ಪರ ಶಿವಂ ದುಬೆ (50) ಹಾಗೂ ರವೀಂದ್ರ ಜಡೇಜ ಆಕರ್ಷಕ ಅರ್ಧಶತಕಗಳ (53*) ಗಳಿಸಿದರು.ಶೇಖ್ ರಶೀದ್ (19) ಹಾಗೂ ಆಯುಷ್ ಮ್ಹಾತ್ರೆ (32) ದುಬೆ 32 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಜಡೇಜ 35 ಎಸೆತಗಳಲ್ಲಿ 53 ರನ್ ಗಳಿಸಿ (4 ಸಿಕ್ಸರ್, 2 ಬೌಂಡರಿ) ಔಟಾಗದೆ ಉಳಿದರು.ಮುಂಬೈ ಪರ ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ ಗಳಿಸಿದರು.





