ಸುಳ್ಯ:ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆ ಸುಳ್ಯದ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಫೆ.20 ರಂದು ನಡೆಯಿತು. ಮೆಸ್ಕಾಂ ಹಿರಿಯ ಇಂಜಿನಿಯರ್ಗಳು ಭಾಗವಹಿಸಿ ಗ್ರಾಹಕರ ಅಹವಾಲಯ ಆಲಿಸಿದರು. ವಿವಿಧ ಸಮಸ್ಯೆಗಳನ್ನು ಗ್ರಾಹಕರು ಮಂಡಿಸಿದರು.ವಿವಿಧ ಭಾಗಗಳಲ್ಲಿ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಬೇಕು,ಹೆಚ್ಚುವರಿ ಪರಿವರ್ತಕ ಅಳವಡಿಸಬೇಕು ಎಂದು
ಗ್ರಾಹಕರು ಬೇಡಿಕೆಯಿಟ್ಟರು. ಅಜ್ಜಾವರ, ಪಂಜ, ಮಂಡೆಕೋಲು, ಮರ್ಕಂಜಗಳಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹ ವ್ಯಕ್ತವಾಯಿತು. ಇದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಜಿನಿಯರ್ಗಳು ತಿಳಿಸಿದರು.ಜಲಜೀವನ್ ಮಿಷನ್ನಡಿ ಕಾಮಗಾರಿ ಆದರೂ ಟಿಸಿ ಅಳವಡಿಕೆ ಆಗದ ಹಲವು ಸ್ಥಾವರಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕೊಡಲು ಆಗ್ತಾ ಇಲ್ಲಾ. ತಾಲೂಕಿನ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಇದೆ ಎಂದು ಅಮರ ಮುಡ್ನೂರು ಗ್ರಾ.ಪಂ.ಸದಸ್ಯ ಅಶೋಕ್ ಚೂಂತಾರು ಸಭೆಯ ಗಮನಕ್ಕೆ ತಂದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ಜಲಜೀವನ್ ಮಿಷನ್ನ ಎಲ್ಲಾ ಕಾಮಗಾರಿಗಳನ್ನು ಮಾಡುತ್ತಾರೆ. ಒಂದು ವಾರದಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದಾರೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.

ಸಂಪಾಜೆಯ 33 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯ ಪ್ರಗತಿಯ ಬಗ್ಗೆ ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ ಸಭೆಯ ಗಮನ ಸೆಳೆದರು. ಗೂನಡ್ಕ ಶಾಲೆಯ ಬಳಿ ಹೆಚ್ಟಿ ಲೈನ್ ಬದಲಿಸುವ ಬಗ್ಗೆ ಅವರು ಆಗ್ರಹಿಸಿದರು.ಆಲೆಟ್ಟಿ ಗ್ರಾಮದ ಮಾಣಿಮರ್ದುವಿನಲ್ಲಿ ಎಂಟು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕೈಗೊಂಡ ಕ್ರಮಗಳ ಬಗ್ಗೆ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಕೇಳಿದರು.ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದರು.
ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಹಕರು ಗಮನ ಸೆಳೆದರು.
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಿದಾನಂದ, ಸಹಾಯಕ ಇಂಜಿನಿಯರ್ ಸುಪ್ರೀತ್, ಹರಿಕೃಷ್ಣ, ಕಿರಿಯ ಇಂಜಿನಿಯರ್ಗಳಾದ ಲೋಕೇಶ್, ಮನಮೋಹನ, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.