ಸುಳ್ಯ:’ನನ್ನ ಬೂತ್ ಎಲ್ಲಕ್ಕಿಂತಲೂ ಬಲಿಷ್ಠ’ ಎಂಬ ವಾಕ್ಯದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ 10 ಲಕ್ಷ ಬೂತ್ಗಳ ಲಕ್ಷಾಂತರ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಣೆ ಮಾಡಲಾಯಿತು. ಮಹಾ ಅಭಿಯಾನದಲ್ಲಿ
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ಮಾಡಿದರು. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರೊಂದಿಗೆ ಸಂವಾದ “ಮೇರಾ ಬೂತ್ ಸಬ್ ಸೆ ಮಜಬೂತ್” ಕಾರ್ಯಕ್ರಮ ನಡೆಸಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ನೇರ ವೀಕ್ಷಣೆ ಸಂದರ್ಭ
ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಸಂತೋಷ್ ಕುತ್ತಮೊಟ್ಟೆ, ಮಹೇಶ್ ಕುಮಾರ್ ಮೇನಾಲ, ಬೂಡು ರಾಧಾಕೃಷ್ಣ ರೈ, ಜಿನ್ನಪ್ಪ ಪೂಜಾರಿ, ಅಶೋಕ್ ಅಡ್ಕಾರ್, ಜಗದೀಶ್ ಸರಳಿಕುಂಜ, ಶ್ಯಾಮ್ ಪಾನತ್ತಿಲ, ಗುರುಸ್ವಾಮಿ, ಸೋಮನಾಥ ಪೂಜಾರಿ, ನ.ಪಂ.ಸದಸ್ಯರಾದ ಕಿಶೋರಿ ಶೇಟ್, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ ಮತ್ತಿತರರು ಉಪಸ್ಥಿತರಿದ್ದರು.