ಸುಳ್ಯ: ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರು ಗಾಂಧಿನಗರದಲ್ಲಿ ನಿರ್ಮಿಸಿದ ನೂತನ ಮನೆ ‘ಬೈತುಲ್ ಬಿರ್’ ಗೃಹ ಪ್ರವೇಶ ಅ.15 ರಂದು ನಡೆಯಿತು. ಗೃಹ ಪ್ರವೇಶದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಮತ್ತು ಮನೆಗಳ ಹಸ್ತಾಂತರ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಸಾಮೂಹಿಕ ವಿವಾಹದ ಪ್ರಯುಕ್ತ ಏಳು ಜೋಡಿಯ ವಿವಾಹ ನಡೆಯಿತು. ಏಳು ಕುಟುಂಬಗಳಿಗೆ ಉಚಿತ ಮನೆ ನಿರ್ಮಿಸಿ
ಹಸ್ತಾಂತರ ಮಾಡಲಾಯುತು. ಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಂ ಪತ್ಸನಾಪುರಂ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನೆರವೇರಿತು..ಗಾಂಧಿನಗರ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ದುಃವಾ ನೆರವೇರಿಸಿದರು. ಖಲೀಲ್ ಹುದವಿ ಕಾಸರಗೋಡು, ಹುಸೈನ್ ತಂಙಳ್, ಶರಫುದ್ದೀನ್ ಸಹದಿ, ಉಮ್ಮರ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಸಚಿವ ಬಿ.ರನಾನಾಥ ರೈ ಏಳು ಕುಟುಂಬಗಳಿಗೆ ಮನೆ ಹಸ್ತಾಂತರ ಮಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್, ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಪ್ರಮುಖರಾದ ಇಕ್ಬಾಲ್ ಎಲಿಮಲೆ, ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ, ಹಸೈನಾರ್ ಹಾಜಿ ಗೋರಡ್ಕ, ಅಬ್ದುಲ್ ರಜಾಕ್ ರಾಜಧಾನಿ,ಅಬ್ದುಲ್ ಮಜೀದ್ ಜನತಾ, ಎಸ್.ಪಿ ಅಬೂಬಕ್ಕರ್, ಅಬೂಬಕ್ಕರ್ ಮಂಗಳ ಶಾಫಿ ಕುತ್ತಮೊಟ್ಟೆ, ಶಾಹುಲ್ ಹಮೀದ್ ಕುತ್ತಮೊಟ್ಟೆ ಉಪಸ್ಥಿತರಿದ್ದರು. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಪ್ರಮುಖರು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು.