ಸುಳ್ಯ: ಏ.30 ರಂದು ಭಾನುವಾರ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರಿಗೆ ಆಹ್ವಾನ ಬಂದಿದೆ. ಬೆಳಿಗ್ಗೆ ಗಂಟೆ 11 ಕ್ಕೆ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಹಾಗೂ ದೂರದರ್ಶನದಲ್ಲಿ
ಪ್ರಸಾರವಾಗಲಿದೆ. ಏ.30ರಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ರಾಜಭವನಕ್ಕೆ ಬರುವಂತೆ ಆಹ್ವಾನ ಬಂದಿದೆ ಎಂದು ಡಾ.ಚಂದ್ರಶೇಖರ ದಾಮ್ಲೆ ತಿಳಿಸಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಡಾ.ದಾಮ್ಲೆ ಅವರು 75 ಮಂದಿ ಅಪ್ರಕಟಿತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ರಚಿಸಿದ್ದರು ಮತ್ತು ಈ ಶಾಲೆಯಲ್ಲಿ ಕಾರ್ಯಕ್ರಮ ರೂಪಿಸಿದ್ದರು. ಈ ಪುಸ್ತಕ ಹಾಗೂ ಕಾರ್ಯಕ್ರಮದ ಅವರು ಪ್ರಧಾನಿ ಕಾರ್ಯಾಲಯಕ್ಕೂ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಕರೆಸಿದ್ದಾರೋ ಎಂದು ಗೊತ್ತಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ ಮತ್ತು ಪೂ.9.30 ಕ್ಕೆ ಮುನ್ನ ರಾಜಭವನಕ್ಕೆ ತಲುಪುವಂತೆ ತಿಳಸಿದ್ದಾರೆ ಎಂದು ಡಾ.ದಾಮ್ಲೆ ಹೇಳಿದ್ದಾರೆ.