ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರಿಗೆ ವರ್ಗಾವಣೆಯಾಗಿದೆ.
2008ರ ಬ್ಯಾಚ್ನ ಅನುಪಮ್ ಅಗರ್ವಾಲ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. 35 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ
ಹೊರಡಿಸಿದೆ. ಉಡುಪಿ ಎಸ್ಪಿ ಹಾಕೇ ಅಕ್ಷಯ್ ಮಚ್ಚಿಂದ್ರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಅರುಣ್ ಕೆ. ಅವರನ್ನು ಯೋಜಿಸಲಾಗಿದೆ.
ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಉಡುಪಿ ಇಲ್ಲಿನ ಎಸ್ಪಿಯಾಗಿದ್ದ ಅಬ್ದುಲ್ ಅಹದ್ ಅವರನ್ನು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಂಶುಕುಮಾರ್ ಅವರನ್ನು ಉಡುಪಿಯ ಕರಾವಳಿ ಭದ್ರತಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಉಳಿದಂತೆ ಡಾ. ಶರಣಪ್ಪ, ಅಂಶುಕುಮಾರ್, ಹರಿರಾಂ ಶಂಕರ್, ಸೋನಾವಣೆ ರಿಷಿಕೇಶ್ ಭಗವಾನ್, ವರ್ತಿಕಾ ಕಟಿಯಾರ್, ಸಾರಾ ಫಾತಿಮಾ, ಕೆ. ಸಂತೋಷ್ ಬಾಬು ಅವರನ್ನು ಕೂಡಾ ವರ್ಗಾವಣೆಗೊಳಿಸಲಾಗಿದೆ.