ಮಂಡೆಕೋಲು: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಸೋಮವಾರ ಬೆಳಗ್ಗೆ ನವಕ, ಗಣಪತಿ ಹವನ , ಹರಕೆಯ ತುಲಾಭಾರ, ಮಹಾಪೂಜೆ ನಡೆದು ಪ್ರವಾಸ ವಿತರಣೆ ಬಳಿಕ ಸಮಾರಾಧನೆ ನಡೆಯಿತು. ರಾತ್ರಿ ಶ್ರೀ ಭೂತಬಲಿ ಉತ್ಸವ , ಬಲಿಕಟ್ಟೆ ಪೂಜೆ , ವಸಂತೋತ್ಸವ, ಬೆಡಿ ಉತ್ಸವ ಹಾಗೂ
ನೃತ್ಯ ಬಲಿ ಉತ್ಸವ ನಡೆಯಿತು. ಮಂಗಳವಾರ ಬೆಳಗ್ಗೆ ದೇವರ ದರ್ಶನ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಸಂಜೆ 6 ರಿಂದ ಭಜನಾ ಕಾರ್ಯಕ್ರಮ, ರಾತ್ರಿ ದುರ್ಗಾ ಪೂಜೆ , ರಂಗ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ಅಪೂರ್ವ ಪಾವೂರು ಅವರಿಂದ ಭರತನಾಟ್ಯ ಕಾರ್ಯಕ್ರಮ, ಯಕ್ಷಗಾನ ಬಯಲಾಟ ನಡೆಯಿತು.
26ರಂದು ಅಡ್ಡಣ ಪೆಟ್ಟು: ಜಾತ್ರೋತ್ಸವ ಪ್ರಯುಕ್ತ ಏ.26 ರಂದು ಬೆಳಗ್ಗೆ 9 ರಿಂದ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ, ಬೆಳಗ್ಗೆ 10.30 ಕ್ಕೆ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ಬಳಿಕ ಸಿರಿಮುಡಿ ಪ್ರಸಾದ ವಿತರಣೆ, ಮಧ್ಯಾಹ್ನ 12.30 ರಿಂದ ಉದ್ರಾಂಡಿ ಹಾಗೂ ಉಪ ದೈವಗಳ ಕೋಲ ನಡೆಯಲಿದೆ.