ಸುಳ್ಯ: ಸುಳ್ಯ ಹಾಗು ಕಡಬ ತಾಲೂಕಿನ ಕೆಲವು ಕಡೆ ಮೇ.2ರಂದು ಸಾಧಾರಣ ಮಳೆಯಾಗಿದೆ. ಕಲ್ಲಾಜೆಯಲ್ಲಿ 9 ಮಿ.ಮಿ.ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ 3 ಮಿ.ಮಿ, ಮಲ್ಲಾರದಲ್ಲಿ ಒಂದು ಮಿ.ಮಿ. ಮಳೆ ಸುರಿದಿದೆ. ಇಂದು ಉರಿ ಬಿಸಿಲು, ಸೆಕೆಯ ವಾತಾವರಣ
ಮುಂದುವರಿದಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು, ಕೊಡಗು, ಮೈಸೂರು ಸೇರಿ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದೆ ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರದಲ್ಲಿ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ವರೆಗೂ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದೆ.