ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹಾಗು ಮಹಿಳಾ ಮೋರ್ಚಾ ರಾಜ್ಯ ಹಾಗು ರಾಷ್ಟ್ರೀಯ ಪದಾಧಿಕಾರಿಗಳು ಭಾಗವಹಿಸಿದ್ದರು. ದೇವಚಳ್ಳ ಗ್ರಾಮದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು. ಗೌರಿಗುಂಡಿ,ವಾಲ್ತಾಜೆ,ಕನ್ನಡಕಜೆ,ಭಾಗದಲ್ಲಿ
ಪ್ರಚಾರ ನಡೆಯಿತು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ರಾಜ್ಯ ಮಹಿಳಾ ಮೊರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ರಾಷ್ಟ್ರೀಯ ಮಹಿಳಾ ಮೊರ್ಚಾದ ಕಾರ್ಯಕಾರಿಣಿ ಸದಸ್ಯೆ ಆಶ್ವಿನಿ ಮಂಜೇಶ್ವರ, ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ,ಜಿಲ್ಲಾ ಮಹಿಳಾ ಮೊರ್ಚಾ ಕಾರ್ಯದರ್ಶಿ ಸೇವಂತಿ ಮತ್ತಿತರರು ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಎಸ್,ಎನ್, ಮನ್ಮಥ, ವೆಂಕಟ್ ದಂಬೆಕೋಡಿ,ಮುಳಿಯ ಕೇಶವ ಭಟ್,ವಿನಯ್ ಕುಮಾರ್ ಮುಳುಗಾಡು,ಸಾಮಾಜಿಕ ಜಾಲಾತಾಣ ಸಹಸಂಚಾಲಕ ಪ್ರಸಾದ್ ಕಾಟೂರು, ಸ್ಥಳಿಯ ಶಕ್ತಿ ಕೇಂದ್ರ, ಬೂತ್ ನ ಅಧ್ಯಕ್ಷರು, ಕಾರ್ಯಕರ್ತರು, ಉಪಸ್ಥಿತರಿದ್ದರು