ಸುಳ್ಯ:ಡಬಲ್ ಇಂಜಿನ್ ಸರಕಾರದ ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿ ನಿರ್ಲಕ್ಷ್ಯಿಸಿದೆ. ಜನಪರ ಯೋಚನೆ, ಯೋಜನೆ ರೂಪಿಸಿಲ್ಲ.ಆದ್ದರಿಂದ ಜನರು ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ರಾಜ್ಯದಲ್ಲಿ ಜನತೆ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಹೇಳಿದ್ದಾರೆ.
ಅವರು ಸುಳ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ
ಪತ್ರಕರ್ತರ ಜತೆ ಮಾತನಾಡಿದರು.ಜೆಡಿಎಸ್ನ ಚುನಾವಣಾ ಪ್ರಣಾಳಿಕೆಗಳು ಜನಮಾನಸದಲ್ಲಿದಲ್ಲಿ ಈಗಾಗಲೇ ಸ್ಥಾಯಿಯಾಗಿದೆ. ಪಂಚರತ್ನ ಯಾತ್ರೆ ಜೆಡಿಎಸ್ಗೆ ಶಕ್ತಿ ತುಂಬಿ ಪಕ್ಷ ಬಲಿಷ್ಠಗೊಂಡಿದೆ. ರಾಜ್ಯ ಹಾಗೂ ಸುಳ್ಯದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿ ಅಭಿವೃದ್ಧಿ ನಡೆಸಲಿದೆ ಎಂದ ಅವರು ರಾಜ್ಯದಲ್ಲಿ 123 ಸ್ಥಾನಗಳ ಗೆಲುವಿನ ಗುರಿ ಮತ್ತು ನಿರೀಕ್ಷೆ ಇದೆ ಎಂದರು. ಸುಳ್ಯ ಜೆಡಿಎಸ್ ಅಭ್ಯರ್ಥಿ ಎಚ್.ಎಲ್. ವೆಂಕಟೇಶ್ ಅವರು ಉನ್ನತ ವಿದ್ಯಾಭ್ಯಾಸ ಜತೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅನುಭವ ಪಡೆದಿದ್ದಾರೆ. ಸುಳ್ಯ ಭಾಗದಲ್ಲಿ ಸಂಚರಿಸಿ ಜನರ ಜತೆ ಬೆರೆತಿದ್ದಾರೆ ಎಂದರು.
ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಮಾತನಾಡಿ, ಪಂಚರತ್ನ ಯಾತ್ರೆ ಮೂಲಕ ಪಕ್ಷ ಬಲಿಷ್ಠಗೊಂಡಿದೆ. ಜೆಡಿಎಸ್ನ ಚುನವಣಾ ಪ್ರಣಾಳಿಕ ಜನ ಸಾಮಾನ್ಯರಿಗೆ ಶಕ್ತಿ ತುಂಬಲಿದೆ. ಉದ್ಯೋಗ, ಶಿಕ್ಷಣ, ಮಹಿಳಾ ಸಬಲೀಕರಣ, ರೈತರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲರಿಗೂ ಪೂರಕವಾಗುವಂತ ಅಂಶಗಳು ಪ್ರಣಾಳಿಕೆಯಲ್ಲಿದೆ. ಇದು ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಅಗ್ರಹಾರ ದುಗ್ಗಪ್ಪ, ಮತ್ತಿತರರು ಉಪಸ್ಥಿತರಿದ್ದರು.