ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿವೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 209 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ, ದೆಹಲಿಯಲ್ಲಿ
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್ಗೆ ರೂ 1731.50 ಆಗಲಿದೆ ಎಂದು ವರದಿಯಾಗಿದೆ. ದರ ಹೆಚ್ಚಳದ ಬಳಿಕ ಸುಳ್ಯದಲ್ಲಿ 19 ಕೆಜಿ ವಾಣೀಜ್ಯ ಬಳಕೆಯ ಸಿಲಿಂಡರ್ ದರ 1800 ಆಗಲಿದೆ ಎಂದು ಮಾರಾಟ ಏಜೆನ್ಸಿಗಳು ತಿಳಿಸಿವೆ. ತಿಂಗಳ ಹಿಂದೆ ವಾಣಿಜ್ಯ ಬಳಕೆಯ ಸಿಲಿಂಡರ್ ದರ 160 ರೂ ಕಡಿತ ಮಾಡಿತ್ತು. ಇದೀಗ ಕಡಿತ ಮಾಡಿದ ಮೊತ್ತಕ್ಕಿಂತಲೂ ಅಧಿಕ ದರ ಹೆಚ್ಚಿಸಲಾಗಿದೆ.