ಸುಳ್ಯ: ಓದಿನ ಜೊತೆಗೆ ಮಕ್ಕಳಲ್ಲಿ ಅಡಕವಾಗಿರುವ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಏಪ್ರಿಲ್ 1ರಿಂದ 12ರ ತನಕ ಸ್ಕೂಲ್ನಲ್ಲಿ ಆಕರ್ಷಕ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಕಲೆ, ನಾಟಕ, ಅಭಿನಯ, ನೃತ್ಯ ಹೀಗೆ
ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಎಂದರೆ ವಿದ್ಯಾರ್ಥಿಗಳಿಗೆ ಪಂಚಪ್ರಾಣ. ಅಂತಹ ಒಳ್ಳೆಯ ಸದಾವಕಾಶವನ್ನು ಇಲ್ಲಿ ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಈಜು, ನೃತ್ಯ, ಕರ ಕುಶಲಕಲೆ, ಬೆಂಕಿ ರಹಿತ ಅಡುಗೆ, ಮಣ್ಣಿನ ಕಲಾಕೃತಿ ರಚನೆ, ವಿವಿಧ ಆಟಗಳು ಮತ್ತು ಇತರ ಆಕರ್ಷಕ ವಿಷಯಗಳ ಬಗ್ಗೆ ಏಪ್ರಿಲ್ 1ರಿಂದ 12ರ ತನಕ ಕಲಿಸಿಕೊಡಲಾಗುವುದು.
ಸೀಮಿತ ಮಕ್ಕಳಿಗೆ ಅವಕಾಶವಿರುವುದರಿಂದ ಆಸಕ್ತ ವಿದ್ಯಾರ್ಥಿಗಳು ಮಾ.30 ರ ಒಳಗೆ ದಾಖಲಾತಿ ಪಡೆಯುವಂತೆ ಕೋರಲಾಗಿದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:08257-235157, 235156
9483640707, 9880597697