ಸುಳ್ಯ: ಸುಳ್ಯದ ಜನ ಸಾಮಾನ್ಯರ ವರ್ಣ ವಸ್ತ್ರಗಳ ಬಣ್ಣದ ಕನಸಿಗೆ ಮೂರ್ತ ರೂಪ ನೀಡಿ ಬದುಕಿಗೆ ಮಧುರ ಕ್ಷಣಗಳನ್ನು ನೀಡುವ ವಸ್ತ್ರ ಮಳಿಗೆ ಸುಳ್ಯದ ಮುಖ್ಯರಸ್ತೆಯಲ್ಲಿ ದ್ವಾರಕ ಹೋಟೆಲ್ ಮುಂಭಾಗದ ಶುಭಾ ಕಾಂಪ್ಲೆಕ್ಸ್‌ನಲ್ಲಿರುವ ಕುಂ..ಕುಂ..ಫ್ಯಾಷನ್. ಕಳೆದ ಹಲವಾರು ವರ್ಷಗಳಿಂದ ಜನರ ವಸ್ತ್ರ ಖರೀದಿಯ ಆಯ್ಕೆಯಾಗಿರುವ ಸುಳ್ಯದ ಜನತೆಯ ಅಚ್ಚುಮೆಚ್ಚಿನ ಮಳಿಗೆ ಕುಂ..ಕುಂ.. ಸುಳ್ಯದ ಫ್ಯಾಷನ್ ಜಗತ್ತಿನ ‘ಐಕಾನ್’ ಆಗಿದೆ. ಮಿತ ದರದಲ್ಲಿ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್

ವಸ್ತ್ರಗಳ ಅಪೂರ್ವ ಸಂಗ್ರಹವೇ ಇರುವ ಕುಂ..ಕುಂ..ಫ್ಯಾಷನ್‌ನಲ್ಲಿ ಗಂಡು ಹೆಣ್ಣು ವ್ಯತ್ಯಾಸವಿಲ್ಲದೆ ಎಲ್ಲಾ ಪ್ರಾಯದವರಿಗೂ ಒಪ್ಪುವ ವಿವಿಧ ಕಂಪೆನಿಗಳ ಬ್ರಾಂಡೆಡ್ ವಸ್ತ್ರಗಳು ಲಭ್ಯವಿದೆ. ಮನಸ್ಸಿಗೆ ಇಷ್ಟವಾದ ಬಣ್ಣ, ಡಿಸೈನ್, ಬ್ರಾಂಡ್ ಹಾಗು ಕೈಗೆಟಕುವ ದರ.. ಇದು ಕುಂ..ಕುಂ..ನ ಸ್ಪೆಷಲ್.
ದಸರಾ,ದೀಪಾವಳಿ,ಬಕ್ರೀದ್, ಕ್ರಿಸ್‌ಮಸ್, ಚೆನ್ನಕೇಶವ ದೇವಾಲಯದ ಜಾತ್ರೋತ್ಸವ.. ಹೀಗೆ ಸಾಲು..ಸಾಲು ಹಬ್ಬ ಮತ್ತು ಉತ್ಸವಗಳಿಗೆ ಗ್ರಾಹಕರನ್ನು ಸೆಳೆಯಲು ಮಳಿಗೆ ತುಂಬಾ ಆಕರ್ಷಕ ವಿನ್ಯಾಸದ ಮನಸೂರೆಗೊಳ್ಳುವ ಬಣ್ಣ ಬಣ್ಣದ ಬಟ್ಟೆ ಬಂದಿದೆ.
ಅತ್ಯುತ್ತಮ ವಸ್ತ್ರಗಳನ್ನು ನೀಡುವುದರ ಜೊತೆಗೆ ಗ್ರಾಹಕರಿಗೆ ಅತ್ಯಾಕರ್ಷಕ ಉಡುಗೊರೆಗಳನ್ನು ನೀಡುವುದರಲ್ಲಿಯೂ ಕುಂ..ಕುಂ..ಫ್ಯಾಷನ್ ಮುಂಚೂಣಿಯಲ್ಲಿದೆ.ತನ್ನ ಲಾಭಾಂಶದ ದೊಡ್ಡ ಪಾಲನ್ನು ಗ್ರಾಹಕರಿಗೆ ಉಡುಗೊರೆ ರೂಪದಲ್ಲಿ ನೀಡುವ ಮೂಲಕ ಗ್ರಾಹಕ ಸ್ನೇಹಿಯಾದ ಕುಂ..ಕುಂ.. ಇದೀಗ ಹಬ್ಬಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು ಭರ್ಜರಿ ಆಫರ್‌ಗಳನ್ನೇ ಘೋಷಿಸಿದೆ. 108 ದಿನಗಳ ‘ಬಿಗ್ ಫೆಸ್ಟಿವಲ್ ಸೇಲ್’ ಘೋಷಿಸಿದೆ.

ಕಳೆದ ಹಲವು ವರ್ಷಗಳಿಂದ ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಹಬ್ಬದ ಸಂಭ್ರಮ ಹೆಚ್ಚಿಸಲು ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಆಯೋಜಿಸುತ್ತಾ ಬಂದಿರುವ ಕುಂ..ಕುಂ .. ಫ್ಯಾಶನ್‌ನಿಂದ ಇದುವರೆಗೆ 300 ಕ್ಕೂ ಅಧಿಕ ಮಂದಿ ಗ್ರಾಹಕರು ಬಹುಮಾನಗಳನ್ನು ಗೆದ್ದಿದ್ದಾರೆ.
ಇದೀಗ ಮಳಿಗೆಯಿಂದ ಗ್ರಾಹಕರಿಗೆ ರೂ.999 ಖರೀದಿ ಮೇಲೆ ಖಚಿತ ಉಡುಗೊರೆ ಹಾಗೂ ಲಕ್ಕಿ ಕೂಪನ್ ನೀಡಲಾಗುತ್ತದೆ.
ಪ್ರತೀ ವರ್ಷದಂತೆ ಈ ಬಾರಿಯೂ ವಸ್ತ್ರ ಖರೀದಿಯಲ್ಲಿ ನೀಡುವ ಲಕ್ಕಿ ಕೂಪನ್‌ನ ಬಹುಮಾನಗಳಾಗಿ ಸ್ಕೂಟರ್, ರೆಫ್ರಿಜರೇಟರ್,ಎಲ್.ಇ.ಡಿ. ಟಿವಿ,ವಾಷಿಂಗ್ ಮೆಷಿನ್ , ಗ್ರೈಂಡರ್ ಇತ್ಯಾದಿ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.

ಫೆಷ್ಟಿವಲ್ ಸೇಲ್ ಪ್ರಯುಕ್ತ ವಸ್ತ್ರ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ತರಹದ ಆಕರ್ಷಕ ಉಡುಪುಗಳ ಹೊಸ ಹೊಸ ಸ್ಟಾಕ್‌ಗಳು ಬಂದಿರುತ್ತದೆ ಎಂದು ಮಳಿಗೆಯ ಪಾಲುದಾರರು ತಿಳಿಸಿದ್ದಾರೆ. ಜೊತೆಗೆ ಆಯುಧ ಪೂಜೆಗೆ ಬೇಕಾಗುವ ಗಿಫ್ಟ್‌ಗಳು ಸಂಸ್ಥೆಯಲ್ಲಿ ಸಿದ್ಧವಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
