ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಮಹಾಸಭೆಯು ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ವರದಿ, ಲೆಕ್ಕಪತ್ರ ಮಂಡಿಸಲಾಯಿತು. ೨೦೨೩ರಲ್ಲಿ ನಡೆಯುವ ೧೯ನೇ ವರ್ಷದ ಉತ್ಸವ
ಪ್ರಶಾಂತ್ ಆಚಾರ್ಯ
ವಿನ್ಯಾಸ್ ಹೊಸೊಳಿಕೆ
ರತ್ನಾಕರ ಸುಬ್ರಹ್ಮಣ್ಯ
ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿನ್ಯಾಸ್ ಹೊಸೋಳಿಕೆ ನೇಮಕಗೊಂಡರು.ಉಳಿದಂತೆ ಸುಹಾಸ್ ಎಚ್.ಎಲ್, ಜಯರಾಮ ಎಚ್ ಎಲ್ ಶೇಖರ್ ಸುಬ್ರಹ್ಮಣ್ಯ (ಉಪಾಧ್ಯಕ್ಷರು), ರತ್ನಾಕರ ಸುಬ್ರಹ್ಮಣ್ಯ(ಸಂಚಾಲಕರು), ದಿನೇಶ್ ಮೊಗ್ರ(ಕೋಶಾಧಿಕಾರಿ), ದೇವಿಚರಣ್ ಕಾನಡ್ಕ(ಸಹಕೋಶಾಧಿಕಾರಿ), ಗಣೇಶ್ ಕಾಶಿಕಟ್ಟೆ(ಜತೆ ಕಾರ್ಯದರ್ಶಿ), ಆಯ್ಕೆಯಾದರು.