ಲಖನೌ: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ 98 ರನ್ಗಳ ಗೆಲುವು ದಾಖಲಿಸಿತು.
11 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಎಂಟರಲ್ಲಿ ಗೆದ್ದು 16 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ
12 ಪಾಯಿಂಟ್ಸ್ ಸಂಪಾದಿಸಿರುವ ಲಖನೌ ತಂಡವು ನಾಲ್ಕರಿಂದ ಐದನೇ ಸ್ಥಾನಕ್ಕೆ ಕುಸಿದಿದೆ.
ಸುನಿಲ್ ನಾರಾಯಣ (81, 39ಎ, 4X6, 6X7) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 20 ಓವರ್ಗಳಲ್ಲಿ 6 ವಿಕೆಟ್ಗೆ 235 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ 137 ರನ್ಗಳಿಗೆ ಆಟ ಮುಗಿಸಿತು. ರಾಹುಲ್ (25) ಹಾಗೂ ಮಾರ್ಕಸ್ ಸ್ಟೊಯಿನಿಸ್ (36) ಹೊರತು ಪಡಿಸಿದರೆ ಉಳಿದವರಿಂದ ಬೆಂಬಲ ದೊರೆಯಲಿಲ್ಲ. ಕೆಕೆಆರ್ ಪರ ಫಿಲ್ ಸಾಲ್ಟ್ (32; 14ಎ, 4X6, 6X1), ಅಂಗಕ್ರಿಷ್ ರಘುವಂಶಿ (32; 26ಎ, 4X3, 6X1) ಉತ್ತಮ ಬ್ಯಾಟಿಂಗ್ ನಡೆಸಿದರು