ನವದೆಹಲಿ: ಲೋಕಸಭಾ ಚುನಾವಣೆಯ ಏಳೂ ಹಂತಗಳ ಮತದಾನ ಪೂರ್ಣಗೊಂಡ ಬೆನ್ನಲ್ಲೇ ಪ್ರಕಟಗೊಂಡ ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕೇರಳದಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರಲಿದೆ ಎಂದಿವೆ. ಕೇರಳದಲ್ಲಿ ಕಾಂಗ್ರೆಸ್ 13ರಿಂದ 14 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದರೆ, ಬಿಜೆಪಿ 2ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕೇರಳದಲ್ಲಿ
ನೆಲೆ ಹುಡುಕಿಕೊಳ್ಳಲಿದೆ. ಆಡಳಿತಾರೂಢ ಎಲ್ಡಿಎಫ್ 4-5 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇಲ್ಲಿ ಒಟ್ಟು 20 ಕ್ಷೇತ್ರಗಳಿವೆ.
ಕೇರಳದ ಸಮೀಕ್ಷೆಯ ವರದಿ ಹೀಗಿದೆ…
ಸಿಎನ್ಎಕ್ಸ್: ಯುಡಿಎಫ್: 13–15; ಎಲ್ಡಿಎಫ್: 3–5;ಎನ್ಡಿಎ: 1–3
ಜನ್ ಕಿ ಬಾತ್: ಯುಡಿಎಫ್: 14–17; ಎಲ್ಡಿಎಫ್: 3–5; ಎನ್ಡಿಎ: 0–1
ಸಿ–ವೋಟರ್ಸ್: ಯುಡಿಎಫ್: 17–19; ಎಲ್ಡಿಎಫ್–0; ಎನ್ಡಿಎ: 1–3
ಡಿ–ಡೈನಾಮಿಕ್ಸ್: ಯುಡಿಎಫ್: 0–14; ಎಲ್ಡಿಎಫ್: 0–4;ಎನ್ಡಿಎ: 0–2
ಆ್ಯಕ್ಸಿಸ್ ಮೈ ಇಂಡಿಯಾ: ಯುಡಿಎಫ್: 17–18; ಎಲ್ಡಿಎಫ್: 0–1;ಎನ್ಡಿಎ: 2–3
ತಮಿಳುನಾಡಿನಲ್ಲಿ ಒಟ್ಟು 39 ಸ್ಥಾನಗಳಿವೆ. ಇದರಲ್ಲಿ ಆಡಳಿತಾರೂಢ ಡಿಎಂಕೆ ಈ ಬಾರಿ 20–22 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 6 ರಿಂದ 8, ಎಐಎಡಿಎಂಕೆ–12 ಹಾಗೂ ಬಿಜೆಪಿ 1ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ.