ಸುಳ್ಯ:ಶತಮಾನೋತ್ಸವ ಸಂಭ್ರಮದಲ್ಲಿರುವ ಕಂದ್ರಪ್ಪಾಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಕೊಡಬೇಕೆಂದು ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿದರು. 1924ನೇ ಇಸವಿಯಲ್ಲಿ ಆರಂಭವಾದ ಶಾಲೆ ಶತಮಾನೋತ್ಸವ ಪೂರೈಸುತ್ತಿದ್ದು ಶಿಕ್ಷಣ ಸಂಸ್ಥೆಯ ಶತಮಾನೋತ್ಸವವನ್ನು ಸಕಲ ಸಂಭ್ರಮದಿಂದ ಆಚರಿಸಲು
ನಿರ್ಧರಿಸಲಾಗಿದೆ. ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯ, ಆಧುನಿಕ ಶಿಕ್ಷಣಕ್ಕೆ ಪೂರಕವಾದ ಕಂಪ್ಯೂಟರ್ ಕೊಠಡಿ ಮತ್ತು ಸೌಕರ್ಯಗಳು, ಆಟದ ಮೈದಾನದ ವಿಸ್ತರಣೆ, ರಂಗಮಂದಿರ ನಿರ್ಮಾಣ, ಶಾಲೆಯ ಮೇಲ್ಟಾವಣಿಯನ್ನು ಸುಭದ್ರಗೊಳಿಸುವುದು, ನೆಲಕ್ಕೆ ಟೈಲ್ಸ್ ಹಾಸುವಿಕೆ, ಶೌಚಾಲಯ ನಿರ್ಮಾಣ, ಶಾಲಾ ಆವರಣಗೋಡೆ, ಆಂಗ್ಲಮಾಧ್ಯಮ ಶಿಕ್ಷಣ, ಬಿ.ಸಿ.ಎಂ. ಹಾಸ್ಟೆಲ್ ನಿರ್ಮಾಣ ಮೊದಲಾದ ಮೂಲಭೂತ ಸೌಕರ್ಯಗಳನ್ನು ರೂಪಿಸಿ, ಸರ್ವಾಂಗ ಸುಂದರ ಶಾಲೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಇಸಕ್ಕೆ ಸುಮಾರು 50 ಲಕ್ಷ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗೆ ಅನುದಾನ ಒದಗಿಸಬೇಕು ಎಂದು ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಮನವಿಯಲ್ಲಿ ವಿನಂತಿಸಲಾಗಿದೆ. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶರಾಜ ಹಿರಿಯಡ್ಕ, ವಿಜೇಶ್ ಹಿರಿಯಡ್ಕ
ಮತ್ತಿತರರು ಉಪಸ್ಥಿತರಿದ್ದರು.
ಹಿರಿಯರಾದ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ದಿನೇಶ್ ಅಡ್ಕಾರ್, ಸಂತೋಷ್ ಜಾಕೆ ಮತ್ತಿತರರು ಉಪಸ್ಥಿತರಿದ್ದರು.