ಸುಳ್ಯ:ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಕಡಬ ತಾಲೂಕಿನ
ಗ್ರಾಮ ಪಂಚಾಯತ್ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಲಾಗಿದೆ.
ಕಡಬ ತಾಲೂಕಿನ 21 ಗ್ರಾಮ ಪಂಚಾಯತ್ಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ ಜೂ.17 ರಂದು ತಾಲೂಕು ಪಂಚಾಯತ್
ಸಭಾಂಗಣದಲ್ಲಿ ನಡೆಯಿತು.
ಮೀಸಲಾತಿ ಈ ರೀತಿ ಇದೆ.
ಗೋಳಿತೊಟ್ಟು : ಅಧ್ಯಕ್ಷತೆ- ಹಿಂದುಳಿದ ವರ್ಗ ಬಿ ಮಹಿಳೆ, ಉಪಾಧ್ಯಕ್ಷತೆ- ಹಿಂದುಳಿದ ವರ್ಗ ಎ
ನೆಲ್ಯಾಡಿ : ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ- ಹಿಂದುಳಿದ ವರ್ಗ ಎ ಮಹಿಳೆ
ಕೌಕ್ರಾಡಿ: ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ-ಹಿಂದುಳಿದ ವರ್ಗ ಎ ಮಹಿಳೆ
ನೂಜಿಬಾಳ್ತಿಲ: ಅಧ್ಯಕ್ಷತೆ- ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷತೆ-ಸಾಮಾನ್ಯ
ಶಿರಾಡಿ: ಅಧ್ಯಕ್ಷತೆ- ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ
ಕೊಂಬಾರು: ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ,
ಬಿಳಿನೆಲೆ: ಅಧ್ಯಕ್ಷತೆ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ- ಹಿಂದುಳಿದ ವರ್ಗ ಎ
ಐತೂರು: ಅಧ್ಯಕ್ಷತೆ- ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ,
ಕೋಣಾಜೆ: ಅಧ್ಯಕ್ಷತೆ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ-ಸಾಮಾನ್ಯ,
ಮರ್ಧಾಳ: ಅಧ್ಯಕ್ಷತೆ- ಎಸ್ ಟಿ ಮಹಿಳೆ, ಉಪಾಧ್ಯಕ್ಷತೆ- ಸಾಮಾನ್ಯ
ಕುಟ್ರುಪಾಡಿ : ಅಧ್ಯಕ್ಷತೆ-ಎಸ್ಸಿ ಮಹಿಳೆ, ಉಪಾಧ್ಯಕ್ಷತೆ- ಹಿಂದುಳಿದ ವರ್ಗ ಎ ಮಹಿಳೆ
ಪೆರಾಬೆ: ಅಧ್ಯಕ್ಷತೆ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ ಎಸ್ಟಿ ಮಹಿಳೆ
ರಾಮಕುಂಜ:ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ- ಎಸ್ಸಿ
ಕೊಯಿಲ: ಅಧ್ಯಕ್ಷತೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ ಹಿಂದುಳಿದ ವರ್ಗ ಎ
ಅಲಂಕಾರು: ಅಧ್ಯಕ್ಷತೆ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ ಸಾಮಾನ್ಯ.
ಸವಣೂರು: ಅಧ್ಯಕ್ಷತೆ- ಎಸ್ ಸಿ ಉಪಾಧ್ಯಕ್ಷತೆ- ಹಿಂದುಳಿದ ವರ್ಗ ಬಿ ಮಹಿಳೆ,
ಬೆಳಂದೂರು: ಅಧ್ಯಕ್ಷತೆ- ಹಿಂದುಳಿದ ವರ್ಗ ಎ ಮಹಿಳೆ ಉಪಾಧ್ಯಕ್ಷತೆ-ಸಾಮಾನ್ಯ
ಕಾಣಿಯೂರು : ಅಧ್ಯಕ್ಷತೆ- ಹಿಂದುಳಿದ ವರ್ಗ ಎ ಉಪಾಧ್ಯಕ್ಷತೆ ಎಸ್ಸಿ ಮಹಿಳೆ.
ಎಡಮಂಗಲ : ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆ
ಬಳ್ಪ: ಅಧ್ಯಕ್ಷತೆ -ಸಾಮಾನ್ಯ ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ
ಸುಬ್ರಹ್ಮಣ್ಯ: ಅಧ್ಯಕ್ಷತೆ ಹಿಂದುಳಿದ ವರ್ಗ ಎ ಮಹಿಳೆ ಉಪಾಧ್ಯಕ್ಷತೆ- ಸಾಮಾನ್ಯ
ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ., ಕಡಬ ತಹಶೀಲ್ದಾರ್ ರಮೇಶ್ ಬಾಬು, ಸುಳ್ಯ ತಾ.ಪಂ. ಇಒ ಭವಾನಿಶಂಕರ್ ಎನ್., ಕಡಬ ತಾ.ಪಂ. ಇಒ ನವೀನ್ ಕುಮಾರ್ ಭಂಡಾರಿ, ಜಿಲ್ಲಾಧಿಕಾರಿ ಕಛೇರಿಯ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು. ಇಒ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು.