ಬೆಳ್ಳಾರೆ:ಎಸ್ ಎಸ್ ಎಲ್ ಸಿ ಯಿಂದ ನೇರವಾಗಿ ಅಥವಾ ಪ್ರಥಮ ಪಿಯುಸಿ ಅನುತ್ತೀರ್ಣರಾಗಿ ನೇರವಾಗಿ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಕಲಾ ವಿಭಾಗದ
ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100% ಫಲಿತಾಂಶ ದಾಖಲಾಗಿದೆ .ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 14ವಿದ್ಯಾರ್ಥಿಗಳ ಪೈಕಿ 13ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.93 ಫಲಿತಾಂಶ ದಾಖಲಾಗಿದೆ .
ಓರ್ವಳು ವಿಶಿಷ್ಟ ಶ್ರೇಣಿಯಲ್ಲಿ, 8ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ, ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಗಾನ ಕೆ (546 ) ಕಾವ್ಯ (509) ,ವಿಶ್ಮಿತಾ ಬಿ (490) ,ರಾಹಿಲ್ ಎನ್ .ಎಚ್ (434) ,ಚಂದನ್ ಕೆ.ಎಸ್ (421)ಮಹಮ್ಮದ್ ಅಪ್ಜಲ್ (406),ಸುಶಾಂತ್ ಕೆ (406)ಅತೀ ಹೆಚ್ಚು ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 8ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿ.ಜಿ ನಳಿನಿ (427)ವಿನುತ ಕೆ.ಆರ್ (369)ಅತೀ ಹೆಚ್ಚು ಅಂಕಗಳಿಸಿದ್ದಾರೆ .