ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್ ವೆಂಕಟೇಶ್ ಅವರು ಮೇ.2 ರಂದು ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು. ಕಡಬ ಭಾಗದಲ್ಲಿ ಇಂದು ಪ್ರಚಾರ ಕೈಗೊಂಡ ಹೆಚ್.ಎಲ್.ವೆಂಕಟೇಶ್ ಕಡಬ ನಗರದ ರಿಕ್ಷಾ ಚಾಲಕರನ್ನು ಭೇಟಿಯಾಗಿ
ಮಾತುಕತೆ ನಡೆಸಿ ಮತ ಯಾಚಿಸಿದರು.ಜನತಾದಳ ಸರಕಾರ ಅಧಿಕಾರಕ್ಕೆ ಬಂದರೆ ಅಟೋ ಚಾಲಕರಿಗೆ ಮಾಸಿಕ ರೂಪಾಯಿ ರೂ.3000 ರೂ ನೀಡುವ ಭರವಸೆಯನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಇದರ ಪ್ರತಿಯೊಬ್ಬ ಚಾಲಕರಿಗೆ ಲಭಿಸಲಿದೆ ಎಂದು ಹೆಚ್.ಎಲ್.ವೆಂಕಟೇಶ್ ಹೇಳಿದರು.ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಕಡಬ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಪಕ್ಷದ ಮುಖಂಡರು ಕಾರ್ಯಕರ್ತರು ಬೆಂಬಲಿಗರು ಉಪಸ್ಥಿತರಿದ್ದರು.