ಸುಳ್ಯ: ಸುಳ್ಯದ ಪ್ರಸಿದ್ಧ ದಿನಸಿ ಹಾಗೂ ಗೃಹ ಬಳಕೆಯ ಅಂಗಡಿ ಗಾಂಧಿನಗರದ ಜನತಾ ಸ್ಟೋರ್ನಲ್ಲಿ ಬಂಪರ್ ಬಹುಮಾನಗಳ ಡ್ರಾ ನಡೆಯಿತು. ಜನತಾ ಸ್ಟೋರ್ನಲ್ಲಿ ಮಾರಾಟ ಮಾಡುತ್ತಿದ್ದ ಕಬನಿ ಕಂಪನಿಯ 4 ಕೆಜಿ ಡಿಟರ್ಜೆಂಟ್ನೊಂದಿಗೆ ಕೂಪನ್ ನೀಡಲಾಗುತ್ತಿತ್ತು. ಇದರ ಪ್ರಥಮ
ಬಹುಮಾನವಾಗಿ ವಾಶಿಂಗ್ ಮೆಷಿನ್ ನೀಡಲಾಗುತ್ತದೆ. ಇದರ ಡ್ರಾ ಜನತಾ ಸ್ಟೋರ್ನಲ್ಲಿ ನಡೆಸಲಾಯಿತು. ಡ್ರಾದಲ್ಲಿ ಪ್ರಥಮ ಬಹುಮಾನ 216 ಸಂಖ್ಯೆಯ ಕೂಪನ್ಗೆ ದೊರೆತಿದ್ದು ಶೋಭಾ ಎಂಬವರು ಬಹುಮಾನಕ್ಕೆ ಅರ್ಹರಾಗಿದ್ದಾರೆ ಎಂದು ಜನತಾ ಸ್ಟೋರ್ನ ಪ್ರಕಟಣೆ ತಿಳಿಸಿದೆ. ಡ್ರಾ ಸಂಸರ್ಭದಲ್ಲಿ ಜನತಾ ಗ್ರೂಪ್ಸ್ನ ಅಬ್ದುಲ್ ಹಮೀದ್, ಅಬ್ದುಲ್ ಮಜೀದ್, ರಿಜ್ವಾನ್ ಅಹಮ್ಮದ್ ಜನತಾ, ಇರ್ಫಾನ್ ಜನತಾ, ರಜ್ಜು ಭಯ್ಯಾ, ಜನತಾ ಸ್ಟೋರ್ನ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.