ಐವರ್ನಾಡು:ಗೆಳೆಯರ ಬಳಗ ಐವರ್ನಾಡು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ. ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಕಾರದಲ್ಲಿ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರ ಪೂರ್ವಬಾವಿ ಸಭೆ ನಡೆಯಿತು. ಸಭೆಯಲ್ಲಿ ಗೌರವ ಅಧ್ಯಕ್ಷರಾದ ಎಸ್.ಎನ್. ಮನ್ಮಥ ಅವರು ಮಾತನಾಡಿ ಅಂತಾರಾಜ್ಯ ಮಟ್ಟದ
ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಐವರ್ನಾಡಿನಲ್ಲಿ ಆಯೋಜಿಸಲಾಗುವುದು. ಬಲಿಷ್ಟ 12 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದು ಅದ್ದೂರಿಯಾಗಿ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಎಲ್ಲಾ ಸಿದ್ದತೆಗಳನ್ನು ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು. ಬ್ಯಾಂಕ್ ಆಫ್ ಬರೊಡ,ಕರ್ನಾಟಕ ಸ್ಟೇಟ್ ಪೊಲೀಸ್, ಆರ್.ಡಬ್ಲ್ಯೂ ಎಫ್.,ಎಚ್.ಎಂ.ಟಿ.ಬೆಂಗಳೂರು, ಮೈಸೂರು ಯುನಿವರ್ಸಿಟಿ, ಎಸ್.ಡಿ.ಎಂ.ಉಜಿರೆ, ಆಳ್ವಾಸ್ ಮೂಡಬಿದ್ರೆ,ವಿದ್ಯಾ ಆಂಜನೇಯ ಉಳ್ಳಾಲ,ಫ್ರೆಂಡ್ಸ್ ಕಡಬ, ಎನ್.ಎಂ.ಸಿ.ಸುಳ್ಯ, ದೊರೈಸಿಂಗಂ ತಮಿಳುನಾಡು, ಕಟ್ಟಕುಡಿ ತಮಿಳುನಾಡು ಸೇರಿ ಒಟ್ಡು
12 ಬಲಿಷ್ಟ ತಂಡಗಳು ಭಾಗವಹಿಸಲಿದೆ ಎಂದು ಹೇಳಿದರು. ಪ್ರಥಮ ಬಹುಮಾನವಾಗಿ 70 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 50 ಸಾವಿರ ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ 30 ಸಾವಿರ ಮತ್ತು ಟ್ರೋಫಿ ನೀಡಲಾಗುವುದು ಎಂದು ಅವರು ವಿವರಿಸಿದರು.ಗೆಳೆಯರ ಬಳಗದ ಅಧ್ಯಕ್ಷ ಸಾತ್ವಿಕ್ ಕುದುಂಗು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಸಂಚಾಲಕ ವಾಸುದೇವ ಬೊಳುಬೈಲು, ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ, ದೊಡ್ಡಣ್ಣ ಬರೆಮೇಲು,bಮಾಧವ ಭಟ್ ಶೃಂಗೇರಿ,ಬಾಲಕೃಷ್ಣ ಕೀಲಾಡಿ, ಮೋಹನ್ ಸುಂದರ, ಶಾಂತಾರಾಮ ಕಣಿಲೆಗುಂಡಿ, ಶಿವಪ್ರಸಾದ್ ಕಟ್ಟತ್ತಾರು,ಶಿವಪ್ರಸಾದ್ ದರ್ಖಾಸ್ತು,ಶೇಖರ ಮಡ್ತಿಲ,ಮಹೇಶ ಜಬಳೆ,ರವಿನಾಥ ಮಡ್ತಿಲ,ರಾಜೇಂದ್ರ ಪಾತಿಕಲ್ಲು,ಶರತ್ ಸಿ.ಕೂಪ್, ನಟರಾಜ ಸಿ.ಕೂಪ್,ರಂಜನ್ ಮೂಲೆತೋಟ,ರಮೇಶ ಮಿತ್ತಮೂಲೆ, ಗುರು ನಿಡುಬೆ,ಚಂದ್ರಕಾಂತ ಕೋಡ್ತೀಲು,ಶೇಖರ ಕೊಯಿಲ,ಜೀವನ್ ಜಬಳೆ ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.