ಮುಲ್ಲನಪುರ(ಚಂಡೀಗಢ) ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಜಯಭೇರಿ ಭಾರಿಸಿದ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಕ್ವಾಲಿಫೈಯರ್ಗೆ ಪ್ರವೇಶಿಸಿತು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 229 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡಕ್ಕೆ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 208 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮುಂಬೈ ತಂಡವು
20 ರನ್ಗಳಿಂದ ಗೆದ್ದಿತು. ಭಾನುವಾರ ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಅದರಲ್ಲಿ ಜಯಿಸಿದ ತಂಡವು ಜೂನ್ 3ರಂದು ನಡೆಯುವ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿರುವ ಸಾಯಿ ಸುದರ್ಶನ್ (80; 49ಎ, 4X10, 6X1) ಮತ್ತು ವಾಷಿಂಗ್ಟನ್ ಸುಂದರ್ (48; 24ಎ, 4X5, 6X3) ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ಇದರಿಂದಾಗಿ ಗುಜರಾತ್ ತಂಡಕ್ಕೆ ಗೆಲುವಿನ ಆಸೆ ಚಿಗುರಿತ್ತು. ಆದರೆ 14ನೇ ಓವರ್ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಕಿದ ಯಾರ್ಕರ್ಗೆ ವಾಷಿಂಗ್ಟನ್ ಸುಂದರ್ ಜೊತೆಗೆ ಕ್ಲೀನ್ಬೌಲ್ಡ್ ಆದರು.16ನೇ ಓವರ್ನಲ್ಲಿ ರಿಚರ್ಡ್ ಗ್ಲೀಸನ್ ಎಸೆತದಲ್ಲಿ ಸಾಯಿ ಸುದರ್ಶನ್ ಕೂಡ ಕ್ಲೀನ್ಬೌಲ್ಡ್ ಆದರು. ನಂತರ ಬಂದ ಬ್ಯಾಟರ್ಗಳೂ ಹೋರಾಟ ನಡೆಸಿದರೂ ಆದರೆ ಮುಂಬೈ ಬೌಲರ್ಗಳು ಬಿಗಿಹಿಡಿತ ಸಾಧಿಸಿದರು.
ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಆರಂಭಿಕ ಜೋಡಿ ರೋಹಿತ್ (81; 50ಎ) ಮತ್ತು ಜಾನಿ ಬೆಸ್ಟೊ (47; 22ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ಮುಂಬೈ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 228 ರನ್ ಗಳಿಸಿತು. ಇವರು
ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 7 ಓವರ್ಗಳಲ್ಲಿ 84 ರನ್ ಗಳಿಸಿದರು. ರೋಹಿತ್ 28 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅವರು ಶತಕ ಗಳಿಸುವ ಭರವಸೆ ಕೂಡ ಮೂಡಿಸಿದ್ದರು. ನಾಲ್ಕು ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಸಿಡಿಸಿದರು. ಜಾನಿ ಕೂಡ 4 ಬೌಂಡರಿ ಮತ್ತು 3 ಸಿಕ್ಸರ್ ಹೊಡೆದರು. ಬಳಿಕಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್ ಸೂರೆ ಮಾಡಿದರು.ನಾಯಕ ಹಾರ್ದಿಕ್ 9 ಎಸೆತಗಳಲ್ಲಿ22 ರನ್ ಹೊಡೆದರು.
Lಸಂಕ್ಷಿಪ್ತ ಸ್ಕೋರು:
ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 228 (ರೋಹಿತ್ ಶರ್ಮಾ 81, ಜಾನಿ ಬೆಸ್ಟೊ 47, ಸೂರ್ಯಕುಮಾರ್ ಯಾದವ್ 33, ತಿಲಕ್ ವರ್ಮಾ 25, ಹಾರ್ದಿಕ್ ಪಾಂಡ್ಯ ಔಟಾಗದೇ 22, ಪ್ರಸಿದ್ಧಕೃಷ್ಣ 53ಕ್ಕೆ2, ಸಾಯಿಕಿಶೋರ್ 42ಕ್ಕೆ2, ಸಿರಾಜ್ 37ಕ್ಕೆ1)
ಗುಜರಾತ್ ಟೈಟನ್ಸ್: 20 ಓವರ್ಗಳಲ್ಲಿ 6ಕ್ಕೆ208. ಸಾಯಿ ಸುದರ್ಶನ್ 80, ಕುಶಾಲ ಮೆಂಡಿಸ್ 20, ವಾಷಿಂಗ್ಟನ್ ಸುಂದರ್ 48, ಶೆರ್ಫೈನ್ ರುದರ್ಫೋರ್ಡ್ 24, ಟ್ರೆಂಟ್ ಬೌಲ್ಟ್ 56ಕ್ಕೆ2.





