ಬೆಂಗಳೂರು: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಸಿಡಿಸಿದ ದಾಖಲೆಯ 7ನೇ ಶತಕದ ಹಾಗೂ ಸತತ ಎರಡನೇ ಪಂದ್ಯದಲ್ಲಿಯೂ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವಿಗೆ 198 ರನ್ ಗುರಿ ನೀಡಿದೆ.
ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಐಪಿಎಲ್ನ ಕೊನೆಯ
ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 197 ರನ್ ಗಳಿಸಲು ಶಕ್ತವಾಯಿತು. ಕೊಹ್ಲಿ 61 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ನೆರವಿನಿಂದ
ಔಟಾಗದೆ 101 ರನ್ ಬಾರಿಸಿದರು. ಕೇವಲ 60 ಎಸೆತಗಳಲ್ಲಿ ಐಪಿಎಲ್ನಲ್ಲಿ 7ನೇ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ನಲ್ಲಿ ಗರಿಷ್ಠ ಶತಕ ಗಳಿಸಿರುವ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್(6 ಶತಕ)ದಾಖಲೆಯನ್ನು ಮುರಿದು ಮುನ್ನುಗ್ಗಿದರು. ಇನಿಂಗ್ಸ್ ಆರಂಭಿಸಿದ ಕೊಹ್ಲಿ ಹಾಗೂ ನಾಯಕ ಎಫ್ಡು ಪ್ಲೆಸಿಸ್(28 ರನ್, 19 ಎಸೆತ, 5 ಬೌಂಡರಿ)ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 67 ರನ್ ಗಳಿಸಿ ಪ್ಲೇ ಆಫ್ಗೆ ತೇರ್ಗಡೆಯಾಗಲು ಗೆಲ್ಲಲ್ಲೇಬೇಕಾದ ಪಂದ್ಯದಲ್ಲಿ ಆರ್ಸಿಬಿಗೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಆದರೆ ಉಳಿದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಬ್ರೇಸ್ವೆಲ್ 24 ರನ್ ಹಾಗೂ ಅನೂಜ್ ರಾವತ್ ಅಜೇಯ 23 ರನ್ ಗಳಿಸಿದರು.