ಹಾಂಗ್ಝೌ:ಏಷ್ಯನ್ ಗೇಮ್ಸ್ನಲ್ಲಿ ಭಾರತ ಇಂದು 3 ಚಿನ್ನ ಗೆದ್ದುಕೊಂಡಿದೆ. ಭಾರತ 21 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕ ಸಹೀತ ಒಟ್ಟು 84 ಪದಕ ಗೆದ್ದು ಕೊಂಡಿದೆ.
ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಅವರು ಮಲೇಷ್ಯಾ ಜೋಡಿಯ ಪ್ರಬಲ ಹೋರಾಟ ಮೆಟ್ಟಿನಿಂತು ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್ನಲ್ಲಿ ಮಿಕ್ಸೆಡ್ ಡಬಲ್ಸ್ ಸ್ವರ್ಣ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.35 ನಿಮಿಷಗಳವರೆಗೆ ನಡೆದ ತೀವ್ರ ಹೋರಾಟದ
ಪಂದ್ಯದಲ್ಲಿ ದೀಪಿಕಾ–ಹರಿಂದರ್ ಪಾಲ್ 11–10, 11–10 ರಿಂದ ಮಲೇಷ್ಯಾದ ಅಯಿಫಾ ಬಿನ್ಥಿ ಅಜಮಾನ್– ಮೊಹಮ್ಮದ್ ಸ್ಯಾಫಿಕ್ ಬಿನ್ ಮೊಹಮದ್ ಕಮಲ್ ಅವರನ್ನು ಸೋಲಿಸಿದರು. ಇದು ಭಾರತಕ್ಕೆ ಸ್ವ್ಕಾಷ್ನಲ್ಲಿ ಎರಡನೇ ಚಿನ್ನ.ಏಷ್ಯನ್ ಗೇಮ್ಸ್ನಲ್ಲಿ ಭಾರತ ಆರ್ಚರಿಯಲ್ಲಿ ಪುರುಷರ ತಂಡ ಚಿನ್ನದ ಸಾಧನೆ ಮಾಡಿದೆ.
ಇಂದು ನಡೆದ ಫೈನಲ್ನಲ್ಲಿ ಕೊರಿಯಾ ತಂಡವನ್ನು ಸೋಲಿಸಿದ ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ಗುರಿಕಾರರ ತಂಡ ಭಾರತಕ್ಕೆ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ತಂದುಕೊಟ್ಟರು.
ಏಷ್ಯನ್ ಗೇಮ್ಸ್ ಆರ್ಚರಿ ಕಾಂಪೌಂಡ್ ತಂಡ ವಿಭಾಗದ ಫೈನಲ್ನಲ್ಲಿ ಚೈನೀಸ್ ತೈಪೇಯಿ ತಂಡವನ್ನು ಮಣಿಸಿದ ಭಾರತ ಚಿನ್ನದ ಪದಕ ಗೆದ್ದಿದೆ.
ಭಾರತದ ಅಗ್ರಮಾನ್ಯ ಆರ್ಚರಿ ಸ್ಪರ್ಧಿಗಳಾದ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಹಾಗೂ ಪರ್ನೀತ್ ಕೌರ್ 230–229 ಪಾಯಿಂಟ್ಗಳ ಅಂತರದಲ್ಲಿ ಚೈನೀಸ್ ತೈಪೇಯಿ ಜೋಡಿಯನ್ನು ಮಣಿಸಿತು.