ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಅಂತಿಮ ಘಟಕ್ಕೆ ಬಂದಿದ್ದು ಭಾರತದ ಗೆಲುವಿಗೆ ಇಂಗ್ಲೆಂಡ್ 192 ರನ್ಗಳ ಗುರಿ ನೀಡಿದೆ.ಗುರಿ ಬೆನ್ನಟ್ಟಿರುವ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. 24ರನ್ ಗಳಿಸಿದ ರೋಹಿತ್ ಶರ್ಮ ಹಾಗೂ 16 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಕ್ರೀಸಿನಲ್ಲಿದ್ದಾರೆ. ಎರಡು ದಿನ ಹಾಗೂ 10 ವಿಕೆಟ್ ಉಳಿದಿರುವಂತೆ ಭಾರತದ ಗೆಲುವಿಗೆ
152 ರನ್ ಅಗತ್ಯವಿದೆ. ಮೊದಲ ಇನ್ನೀಂಗ್ಸ್ನನಲ್ಲಿ 46 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನೀಂಗ್ಸ್ ಆರಂಭಿಸಿದ ಇಂಗ್ಲೆಡ್ ಭಾರತದ ಸ್ಪಿನ್ನರ್ಗಳ ದಾಳಿಗೆ ನಲುಗಿ 145 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಅಶ್ವಿನ್ 5, ಕುಲದೀಪ್ ಯಾದವ್ 4 ಹಾಗೂ ಜಡೇಜ 1 ವಿಕೆಟ್ ಪಡೆದರು. ಈ ಮೊದಲು ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಚೊಚ್ಚಲ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನೀಂಗ್ಸ್ನಲ್ಲಿ 307 ರನ್ನಿಗೆ ಪೇರಿಸಿತು. ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿದ ಧ್ರುವ್ ಜುರೇಲ್, ಕೇವಲ 10 ರನ್ ಅಂತರದಲ್ಲಿ ಚೊಚ್ಚಲ ಶತಕ (90) ವಂಚಿತರಾದರು. 7 ವಿಕೆಟ್ಗೆ 219 ರನ್ಗಳೊಡನೆ ಮೂರನೇ ದಿನದಾಟ ಮುಂದುವರಿಸಿದ ಭಾರತ ಊಟದ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ 103.2 ಓವರ್ಗಳಲ್ಲಿ 307 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಕುಲದೀಪ್ ಯಾದವ್ (28) ಅವರೊಂದಿಗೆ ಇನಿಂಗ್ಸ್ ಬೆಳೆಸಿದ ಜುರೇಲ್, ಎಂಟನೇ ವಿಕೆಟ್ಗೆ 76 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಎರಡನೇ ಟೆಸ್ಟ್ ಪಂದ್ಯ ಆಡುತ್ತಿರುವ ಜುರೇಲ್ ಚೊಚ್ಚಲ ಅರ್ಧಶತಕ ಗಳಿಸಿ ಮಿಂಚಿದರು.ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸಿರ್ ಸಿಡಿಸಿದರು.
ಆಕಾಶ್ ದೀಪ್ 9 ರನ್ ಗಳಿಸಿದರು. ಈ ಮೊದಲು ಭಾರತಕ್ಕೆ ಆಸರೆಯಾಗಿದ್ದ ಯಶಸ್ವಿ ಜೈಸ್ವಾಲ್ 73 ರನ್ ಗಳಿಸಿದ್ದರು. ಇಂಗ್ಲೆಂಡ್ ಪರ 20 ವರ್ಷದ ಆಫ್ ಸ್ಪಿನ್ನರ್ ಶೋಯಬ್ ಬಷೀರ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ಗಳ ಸಾಧನೆ ಮಾಡಿದರು. ಟಾಮ್ ಹಾರ್ಟ್ಲಿ ಮೂರು ಹಾಗೂ ಜೇಮ್ಸ್ ಆ್ಯಂಡರ್ಸನ್ ಎರಡು ವಿಕೆಟ್ ಗಳಿಸಿದರು. ಜೋ ರೂಟ್ ಶತಕದ ಬೆಂಬಲದೊಂದಿಗೆ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 353 ರನ್ ಗಳಿಸಿತ್ತು. ಭಾರತದ ಪರ ರವೀಂದ್ರ ಜಡೇಜ ನಾಲ್ಕು ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ಆಕಾಶ್ ದೀಪ್ ಮೂರು ವಿಕೆಟ್ ಕಬಳಿಸಿದ್ದರು.