ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಪಘಾನಿಸ್ಥಾನ ಉತ್ತಮ ರನ್ ಪೇರಿಸಿದ್ದು ಟೀಂ ಇಂಡಿಯಾ ಗೆಲುವಿಗೆ 273 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಹಸ್ಮತುಲ್ಲಾ ಶಾಹಿದಿ ಮತ್ತು ಅಜ್ಮತ್ತುಲ್ಲಾ ಓಮರ್ಜೈ ಅರ್ಧ ಶತಕ
ದಾಖಲಿಸಿ ಉತ್ತಮ ರನ್ ದಾಖಲಿಸಲು ನೆರವಾದರು. ಇಬ್ರಾಹೀಂ ಝರ್ದಾನ್ 22 ರನ್,ರಹ್ಮನುಲ್ಲಾ ಗುರ್ಬಜ್ 21 ರನ್, ರಹಮತ್ ಶಾ 16 ರನ್ ಗಳಿಸಿ ಔಟಾದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಹಸ್ಮ ತುಲ್ಲಾ ಶಾಹಿದಿ ಮತ್ತು ಒಮರ್ಜೈ 121 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಒಮರ್ಜೈ 62 ರನ್ ಹಾಗೂ ಹಸ್ಮತುಲ್ಲಾ ಶಾಹಿದಿ 80 ರನ್ ಕೊಡುಗೆ ನೀಡಿದರು. ರಶೀದ್ ಖಾನ್ 16, ಮುಜೀಬ್ ಉರ್ ರೆಹಮಾನ್ 10, ನವೀನ್ ಉಲ್ ಹಕ್ 9 ರನ್ ಪೇರಿಸಿದರು.
ಭಾರತದ ಪರ ಜಸ್ಪ್ರಿತ್ ಬೂಮ್ರ 39 ರನ್ ಗೆ 4 ವಿಕೆಟ್ ಪಡೆದು ಮಿಂಚಿದರು.ಹಾರ್ದಿಕ್ ಪಾಂಡ್ಯ 43 ರನ್ ಗೆ 2 ವಿಕೆಟ್ ಪಡೆದರು. ಶಾರ್ದೂಲ್ ಹಾಗೂ ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದರು.