ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇ.11 ರಂದು ಸಂಜೆ ಭೇಟಿ ನೀಡಿದರು. ಬಿಜೆಪಿ ವತಿಯಿಂದ ಇತ್ತೀಚೆಗೆ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ನಿರ್ಮಿಸಿ ನೀಡಿದ ಮನೆಗೆ ಆಗಮಿಸಿದ ಹರೀಶ್ ಪೂಂಜಾ ಪ್ರವೀಣ್ ನೆಟ್ಟಾರು ಅವರ
ತಂದೆ, ತಾಯಿಯವರೊಂದಿಗೆ ಮಾತುಕತೆ ನಡೆಸಿದರು. ಮನೆಯ ಸಮೀಪ ಸ್ಥಾಪಿಸಿದ ಪ್ರವೀಣ್ ನೆಟ್ಟಾರು ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಹರೀಶ್ ಪೂಂಜಾ ‘ನೂತನವಾಗಿ ನಿರ್ಮಾಣಗೊಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಅವರ ತಂದೆ, ತಾಯಿವರ ಆಶೀರ್ವಾದ ಪಡೆದಿದ್ದೇನೆ. ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿ ಬದುಕಿದ್ದ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ನಳಿನ್ಕುಮಾರ್ ನೇತೃತ್ವದಲ್ಲಿ ಮನೆ ನಿರ್ಮಿಸಿ ನೀಡಿರುವುದು
ಮಾದರಿಯಾದ ಕೆಲಸ. ಚುನಾವಣಾ ಸಂದರ್ಭವಾದ ಕಾರಣ ಗೃಹ ಪ್ರವೇಶಕ್ಕೆ ಬರಲು ಸಾಧ್ಯವಾಗಿಲ್ಲ. ಆ ಹಿನ್ನಲೆಯಲ್ಲಿ ಇವತ್ತು ಭೇಟಿ ನೀಡಿದ್ದೇನೆ ಎಂದರು. ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿದ್ದ ಪ್ರವೀಣ್ ನೆಟ್ಟಾರು ಅವರ ನೆನಪು ಸಮಾಜಕ್ಕೆ ಚಿರಕಾಲ ಉಳಿಯುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಬಿಜೆಪಿ ಮುಖಂಡರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಯತೀಶ್ ಆರ್ವಾರ್, ಪ್ರವೀಣ್ ಚಾವಡಿಬಾಗಿಲು ಉಪಸ್ಥಿತರಿದ್ದರು.