ಅಹಮದಾಬಾದ್: ಆರಂಭಿಕ ಬ್ಯಾಟರ್ಗಳಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಅವರ ಸ್ಫೋಟಕ ಶತಕದ ನೆರವಿನಿಂದ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 3 ನಷ್ಟಕ್ಕೆ 231 ರನ್ ಪೇರಿಸಿದೆ.ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಗುಜರಾತ್ಗೆ
ಭರ್ಜರಿ ಆರಂಭ ದೊರೆಯಿತು. ಮೊದಲ ವಿಕೆಟ್ಗೆ ಸುದರ್ಶನ್ ಹಾಗೂ ಗಿಲ್ ಕೇವಲ 104 ಎಸೆತಗಳಲ್ಲಿ 210 ರನ್ ಜತೆಯಾಟ ಆಡಿದರು. ಇಬ್ಬರೂ 50 ಎಸೆತಗಳಲ್ಲಿ ಶತಕ ಪೂರೈಸಿದರು. ಸಾಯಿ ಸುದರ್ಶನ್ 51 ಎಸೆಗಳಲ್ಲಿ 103 ರನ್ (5 ಫೋರ್, 7 ಸಿಕ್ಸ್) ಗಳಿಸಿದರೆ, ಶುಭಮನ್ 55 ಎಸೆತಗಳಲ್ಲಿ 104 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಅವರ ಇನಿಂಗ್ಸ್ನಲ್ಲಿ 9 ಫೋರ್ ಹಾಗೂ 6 ಸಿಕ್ಸರ್ಗಳಿದ್ದವು. ಇಬ್ಬರೂ ಒಂದೇ ಓವರ್ನಲ್ಲಿ ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು. ಇಬ್ಬರು ಔಟ್ ಆಗುತ್ತಿದ್ದಂತೆಯೇ ರನ್ ವೇಗಕ್ಕೂ ಕಡಿವಾಣ ಬಿತ್ತು. ಮೂರನೇ ಕ್ರಮಾಂಕದಲ್ಲಿ ಬಂದ ಡೇವಿಡ್ ಮಿಲ್ಲರ್ 11 ಎಸೆತಗಳಲ್ಲಿ 16 ರನ್ ಗಳಿಸಿದರು. ಶಾರುಖ್ 2 ರನ್ ಗಳಿಸಿ ಕೊನೆ ಎಸೆತದಲ್ಲಿ ರನೌಟ್ ಆದರು.
ಶಾರ್ದೂಲ್ ಠಾಕೂರ್ ಹಾಗೂ ತುಷಾರ್ ದೇಶಪಾಂಡೆ ಹೊರೆತುಪಡಿಸಿ ಚೆನ್ನೈನ ಉಳಿದ ಬೌಲರ್ಗಳು ದುಬಾರಿಯಾದರು.