ಸುಳ್ಯ:ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಸ್ಕೌಟ್ ತಂಡ ಪ್ರಥಮ ಬಹುಮಾನ ಪಡೆದಿದೆ.ರಾಜ್ಯ 31 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಬಂದ 4 ತಂಡಗಳಲ್ಲಿ ಸೈಂಟ್ ಜೋಸೆಫ್ ಶಾಲಾ ತಂಡ ಪ್ರಥಮ ಬಹುಮಾನ ಪಡೆದಿದೆ. ಜಿಲ್ಲಾ ಮಟ್ಟದ
ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಶಾಲೆಯ ಸ್ಕೌಟ್ಸ್ ದಳದ ವಿದ್ಯಾರ್ಥಿಗಳಾದ ಆಶ್ವಿಜ್ ಅತ್ರೇಯ ಜಿ.ಆರ್, ಚಂದನ್ ಎಂ.ಎಸ್, ಲಕ್ಷಜೀತ್, ಬಿಪಿನ್ ಕುಮಾರ್, ದಿವಿಜ್, ಮೌರ್ಯ, ತನ್ಮಯ್, ಹಾರ್ದಿಕ್ ತಂಡದಲ್ಲಿದ್ದರು. ಸ್ಕೌಟ್ಸ್ ಶಿಕ್ಷಕರಾದ ಭಾನುಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.