The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಶ್ರೀನಿವಾಸ ರಾವ್ ಕೈಚಳಕದಲ್ಲಿ ಅರಳಿದ ವಿಘ್ನ ವಿನಾಶಕ..

by ದಿ ಸುಳ್ಯ ಮಿರರ್ ಸುದ್ದಿಜಾಲ August 31, 2022
by ದಿ ಸುಳ್ಯ ಮಿರರ್ ಸುದ್ದಿಜಾಲ August 31, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಗಣೇಶ ಚೌತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಮಳೆಗಾಲ ಮುಗಿಯುತ್ತಿದ್ದಂತೆ ನಾಡಿಗೆ ಬರುವ ಸಂಭ್ರಮದ ದಿನಗಳು.ಗಣೇಶೋತ್ಸವದ ಕಳೆ ಹೆಚ್ಚುವುದು ಅಲ್ಲಿ ಪೂಜಿಸುವ ಗಣೇಶ ವಿಗ್ರಹದ ಚೈತನ್ಯದಿಂದ. ಪ್ರತಿ ವರ್ಷವೂ ಸುಂದರವಾದ ಮತ್ತು ಆಕರ್ಚಕ ಗಣಪತಿ ವಿಗ್ರಹಗಳನ್ನು ತಯಾರಿಸಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕಲಾವಿದರು ಸುಳ್ಯ ಹಳೆಗೇಟಿನ ನಿವೃತ್ತ ಶಿಕ್ಷಕ ಶ್ರೀನಿವಾಸ ರಾವ್.ಕಳೆದ ಮೂರು ದಶಕಗಳಿಂದ ಇವರು ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಕಳೆದ ಎರಡು ವರ್ಷ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ತಾನು ನಿರ್ಮಿಸಿದ ಗಣಪತಿ ವಿಗ್ರಹದ ಜೊತೆ ಶ್ರೀನಿವಾಸ ರಾವ್

ಕೊರೋನಾ ಕಾರಣದಿಂದ ಗಣಪನ ಮೂರ್ತಿ ತಯಾರಿ ಸ್ವಲ್ಪ ಕಡಿಮೆ ಇತ್ತು. ಈ ಬಾರಿ ಇವರ ಕೈಚಳಕದಲ್ಲಿ 10 ಮನಮೋಹಕ ಗಣಪತಿ ವಿಗ್ರಹಗಳು ಅರಳಿವೆ. ಪೂರ್ತಿಯಾಗಿ ಕೈಯಿಂದಲೇ ವಿಗ್ರಹ ನಿರ್ಮಿಸುವ ಇವರು ಮಣ್ಣಿನಿಂದ ಚಿತ್ತಾಕರ್ಷಕ ಚೈತನ್ಯ ತುಂಬಿದ ವಿಗ್ರಹಗಳನ್ನು ತಯಾರಿಸಿ ಸೈ ಎನಿಸಿಕೊಂಡವರು.ಹೆಂಚು ನಿರ್ಮಾಣಕ್ಕೆ ಉಪಯೋಗಿಸುವ ಮಣ್ಣನ್ನು ತಂದು ಬೇಕಾದಂತೆ ಹದಗೊಳಿಸಿ ವಿಗ್ರಹ ತಯಾರಿಸುವ ಶ್ರೀನಿವಾಸ ರಾವ್, ಕಬ್ಬಿಣದ ಮೊಳೆ, ಬಿದಿರಿನ ಮೊಳೆ ಮತ್ತಿತರ ಪರಿಕರ ಬಳಸಿ ವಿಗ್ರಹಕ್ಕೆ ಬೇಕಾದ ರೂಪ ಕೊಡುತ್ತಾರೆ. ಬಳಿಕ ಬಣ್ಣ ನೀಡಿ , ಪಾಲೀಶ್ ಹಚ್ಚಿ ವಿಗ್ರಹವನ್ನು ಸುಂದರಗೊಳಿಸುತ್ತಾರೆ . ಗಣೇಶೋತ್ಸವ ಸಮಿತಿಯವರ ಬೇಡಿಕೆ, ಅಕಾರ ಮತ್ತು ಅಳತೆಯಲ್ಲಿ ಗಣೇಶ ಮೂರ್ತಿಗಳನ್ನು ರಚಿಸಿ ನೀಡುತ್ತಾರೆ. ಸುಳ್ಯ ಸಮೀಪ ಪೆರಾಜೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಳೆದ ಮೇ.ತಿಂಗಳಲ್ಲಿ ನಿವೃತ್ತರಾದವರು ಶ್ರೀನಿವಾಸ ರಾವ್. ಜುಲೈ ಮೊದಲ ವಾರದಿಂದ ಗಣಪತಿ ವಿಗ್ರಹಗಳ ನಿರ್ಮಾಣ ಕಾರ್ಯ ಆರಂಭಿಸಿದ ಇವರು ಸುಮಾರು‌ 45 ದಿನಗಳಲ್ಲಿ 10 ಸುಂದರ ವಿಗ್ರಹ ತಯಾರಿಸಿದ್ದಾರೆ.

ಸ್ವಂತ ಅಭ್ಯಾಸದಿಂದಲೇ ವಿಗ್ರಹ ತಯಾರಿ:
ವಿಗ್ರಹ ತಯಾರಿಸುವ ಕಲೆಯನ್ನು ಶ್ರೀನಿವಾಸ ರಾವ್ ಎಲ್ಲಿಯೂ ಕಲಿತದ್ದಲ್ಲ. ಹವ್ಯಾಸಕ್ಕಾಗಿ ಹಿಂದೆ ಗಣೇಶೋತ್ಸವಕ್ಕೆ ಹಿಂದೆ ಮೂರ್ತಿಯನ್ನು ತಯಾರಿಸುತ್ತಿದ್ದರು. ಹಳೆಗೇಟಿನಲ್ಲಿ ವಿಗ್ರಹ ತಯಾರಿಸಲು ಯಾರು ಇಲ್ಲದ ಸಂದರ್ಭ ಬಂದಾಗ ಇವರಲ್ಲಿ ಗಣಪತಿ ವಿಗ್ರಹ ತಯಾರಿಸುವಂತೆ ಸಮಿತಿಯವರು ಬೇಡಿಕೆಯಿಟ್ಟಿದ್ದರು.ಅದರಂತೆ ಮೂರ್ತಿ ಮಾಡಿ ಕೊಟ್ಟರು. ಅಂದು ಪ್ರಾಯೋಗಿಕವಾಗಿ ಆರಂಭಿಸಿದ ಆ ಪಯಣದಲ್ಲಿ ಇಂದಿನವರೆಗೆ ಸುಮಾರು 500 ಕ್ಕೂ ಮಿಕ್ಕಿ ಆಕರ್ಷಕ ಗಣಪತಿ ವಿಗ್ರಹಗಳನ್ನು ನಿರ್ಮಿಸುವ ಮೂಲಕ ಕಲಾ ನೈಪುಣ್ಯತೆ ಮೆರೆದಿದ್ದಾರೆ.ಆರಂಭದಲ್ಲಿ ಒಂದೆರಡು ವಿಗ್ರಹಗಳಷ್ಟೇ ಮಾಡುತ್ತಿದ್ದರು.ನಂತರದ ವರ್ಷಗಳಲ್ಲಿ ಇವರ ಗಣಪತಿ ಮೂರ್ತಿಗೆ ಭಾರಿ ಬೇಡಿಕೆ ಉಂಟಾಯಿತು. ಕೆಲವು ವರ್ಷ 20 , 25 ವಿಗ್ರಹಗಳನ್ನು ತಯಾರಿಸಿದ್ದೂ ಇದೆ. ಹಿಂದೆಲ್ಲಾ ಸುಳ್ಯ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ದೇಲಂಪಾಡಿ ,ಅಡೂರು , ಕುಂಟಾರುಗಳಲ್ಲಿನ ಗಣೇಶೋತ್ಸವಕ್ಕೂ ವಿಗ್ರಹ ತಯಾರಿಸಿ ನೀಡುತ್ತಿದ್ದರು. ಗಣೇಶೋತ್ಸವಗಳಿಗೆ ವಿಗ್ರಹ ತಯಾರಿಸಿರುವುದರ ಜತೆ ಮನೆಗಳಲ್ಲಿ ಪೂಜಿಸುವ ಚಿಕ್ಕ ಮೂರ್ತಿಗಳಿಗೂ ಈ ಶಿಕ್ಷಕ ರೂಪ ಕೊಟ್ಟಿದ್ದಾರೆ.

ದೊಡ್ಡ ಮೂರ್ತಿಗೆ ವಾರ ಬೇಕು: ದೊಡ್ಡ ಗಣಪತಿ ವಿಗ್ರಹ ನಿರ್ಮಿಸಲು ಒಂದು ವಾರ ಸಮಯ ಬೇಕಾಗುತ್ತದೆ. ಚಿಕ್ಕ ಮೂರ್ತಿಗಳಾದರೆ 2-3 ದಿನ ಬೇಕು. ಒಂದೊಂದೇ ಹಂತ ತಯಾರಿಸಿ ಅದು ಸ್ವಲ್ಪ ಒಣಗಿದ ಮೇಲೆ ಉಳಿದ ಭಾಗಗಳನ್ನು ಮಾಡುತ್ತಾರೆ. ಮಣ್ಣನ್ನು ಮಾತ್ರ ಬಳಸಿ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುವ ಇವರು ಶಾಲೆ ಮಕ್ಕಳಿಗೆ ಮತ್ತು ಪರಿಸರದ ಆಸಕ್ತರಿಗೆ ವಿಗ್ರಹ ತಯಾರಿ ಕಲೆ ಕಲಿಸುತ್ತಾರೆ. ವೇದಿಕೆಗಳನ್ನು ಅಲಂಕರಿಸುವುದರಲ್ಲಿಯೂ ಇವರು ನಿಸ್ಸೀಮರು. ವರ್ಲಿ ಚಿತ್ರ ಕಲಾವಿದರೂ ಆಗಿರುವ ಶ್ರೀನಿವಾಸ ಮಾಸ್ತರ್ ತನ್ನ ವಿದ್ಯಾರ್ಥಿಗಳಿಗೆ ವರ್ಲಿ ಚಿತ್ರಕಲೆ,ಮಣ್ಣಿನ ಮಾದರಿ ತಯಾರಿ , ವಿಗ್ರಹಗಳ ರಚನಾ ಕೌಶಲ ಕಲಿಸುತ್ತಿದ್ದರು.

ಮೂರ್ತಿಗಳಿಗೆ ಬೆಲೆ ಹೇಳುವುದಿಲ್ಲ:
ಗಣೇಶೋತ್ಸವ ಸಮಿತಿಯವರು ಹೇಳಿದ ಮಾದರಿಯಲ್ಲಿ ಮತ್ತು ನೀಡಿದ ಅಳತೆಯಂತೆ ವಿಗ್ರಹ ನಿರ್ಮಿಸಿ ನೀಡುವ ಶ್ರೀನಿವಾಸ ರಾವ್ ವಿಗ್ರಹಗಳಿಗೆ ಬೆಲೆ ಹೇಳುವುದಿಲ್ಲ.ಗಣೇಶೋತ್ಸವ ಸಮಿತಿಯವರು ನೀಡುವ ಮೊತ್ತವನ್ನು ಸ್ವೀಕರಿಸಿ ತೃಪ್ತರಾಗುತ್ತಾರೆ.ತಾನು ಮಾಡುವ ದೇವರ ಮೂರ್ತಿಗೆ ಇಷ್ಟೇ ರೂ ಎಂದು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಅವರ ಮನದಾಳದ ಮಾತು.

ಶ್ರೀನಿವಾಸ ರಾವ್.

“ಕಳೆದ 30 ವರ್ಷಗಳಿಂದ ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತೇನೆ. ಮೂರ್ತಿಗಳನ್ನು ನಿರ್ಮಾಣ ಮಾಡಿ ಕೊಡುವಂತೆ ಹಲವು ಕಡೆಗಳಿಂದ ಬೇಡಿಕೆ ಬರುತ್ತದೆ. ಹಿಂದೆಲ್ಲ 20-25 ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ದೆ. ಈ ಬಾರಿ 10 ಮೂರ್ತಿ ಮಾಡಿದ್ದೇನೆ. ಸಾಧ್ಯವಾದಷ್ಟು ಸಮಯ ವಿಗ್ರಹಗಳನ್ನು ತಯಾರಿಸಬೇಕೆಂಬ ಬಯಕೆ ಇದೆ.
-ಶ್ರೀನಿವಾಸ ರಾವ್.
ಕಲಾವಿದರು

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಪಯಸ್ವಿನಿ ನದಿಯಲ್ಲಿ ದಿಡೀರ್ ಪ್ರವಾಹ:ಕೊಯನಾಡು ಸೇರಿ ಹಲವೆಡೆ ನುಗ್ಗಿದ ನೀರು: ಕೊಚ್ಚಿ ಬಂದ ಭಾರೀ ಗಾತ್ರದ ಮರಗಳು
next post
ಇಂದು ತಿರುವೋಣಂ ಸಂಭ್ರಮ… ಇದು ಮಾನವತೆಯ ಮಹಾಮಂತ್ರ ಮೊಳಗಿಸುವ ಭಾವೈಕ್ಯತೆಯ ಹಬ್ಬ..!

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ವಿವಿಧ ಸಂಘ ಸಂಸ್ಥೆಗಳಿಂದ ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

ಜೂ.10 ರಿಂದ 12: ಸುಳ್ಯ ಕಸಬಾಮೂಲೆ ಸಂಚಾರಿ ಗುಳಿಗ ಕ್ಷೇತ್ರದಲ್ಲಿ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ