ಕಲ್ಲಪಳ್ಳಿ: ಕಾಸರಗೋಡು ಮೀನುಗಾರಿಕಾ ಇಲಾಖೆ ಆಯೋಜಿಸಿದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಸಂದರ್ಭದಲ್ಲಿ, ಕಾಸರಗೋಡು ಜಿಲ್ಲೆಯ ಉತ್ತಮ ಮೀನು ಕೃಷಿಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೃತಕ ಕೆರೆಯಲ್ಲಿ
ಮೀನು ಸಾಕಾಣಿಕೆಯಲ್ಲಿ ಅತ್ಯುತ್ತಮ ಮೀನು ಕೃಷಿಕ ಪ್ರಶಸ್ತಿ ಕಲ್ಲಪಳ್ಳಿಯ ಆರ್.ಸಿ.ಅರುಣ್ ರಂಗತ್ತಮಲೆ ಅವರಿಗೆ ಲಭಿಸಿದೆ.ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ ಪ್ರಶಸ್ತಿ ವಿತರಿಸಿದರು. ಕೃಷಿಕರು ಹಾಗೂ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಹಲವು ವರ್ಷಗಳಿಂದ ಕೃತಕ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.





