ಹೈದರಾಬಾದ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಸೆಣಸಲಿದೆ. ಹೈದರಾಬಾದ್ನಲ್ಲಿ ನಡೆಯುವ ಪಂದ್ಯ ಮಧ್ಯಾಹ್ನ ಎರಡರಿಂದ ಆರಂಭವಾಗಲಿದೆ.ಇನ್ನೊಂದು ಪಂದ್ಯದಲ್ಲಿ
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ, ಬಾಂಗ್ಲಾದೇಶ ವಿರುದ್ಧ ಧರ್ಮಶಾಲಾದಲ್ಲಿ ಆಡಲಿದೆ. ಬೆಳಿಗ್ಗೆ 10.30ರಿಂದ ಪಂದ್ಯ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಇರಲಿದೆ.ನ್ಯೂಜಿಲೆಂಡ್ ಎದುರು 9 ವಿಕೆಟ್ಗಳ ಸೋಲು ಅನುಭವಿಸಿದ್ದ ಇಂಗ್ಲೆಂಡ್ಗೆ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದ ಶ್ರೀಲಂಕಾಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯವೆನಿಸಿದೆ.