ಸುಳ್ಯ:ನಾಡಿನಾದ್ಯಂತ ಮುಸ್ಲೀಂ ಬಾಂಧವರು ಸಂಭ್ರಮ ಸಡಗರದಿಂದ ಈದುಲ್ ಫಿತರ್ ಆಚರಿಸಿದರು. ಮಸೀದಿಗಳಲ್ಲಿ ಈದ್ ಪ್ರಯುಕ್ತ ವಿಶೇಷ ಪ್ರಾರ್ಥನೆ, ಈದ್ ನಮಾಜ್ ನಡೆಯಿತು. ಬಳಿಕ ಪರಸ್ಪರ ಈದ್ ಶುಭಾಶಯ ಹಂಚಿಕೊಂಡರು.
ಮೊಗರ್ಪಣೆ:
ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಆಚರಣೆ ಮತ್ತು ಭಕ್ತಿ ಪ್ರಧಾನ ಈದ್ ನಮಾಜ್ ನಡೆಯಿತು. ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಕಾಫಿ ನಮಾಜ್ ನೇತೃತ್ವ ವಹಿಸಿದ್ದರು. ಮೊಗರ್ಪಣೆ ಎಚ್
ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿಎಂ ಉಸ್ಮಾನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಜಮಾಅತಿನ ನೂರಾರು ಮಂದಿ ಬಾಂಧವರು ಭಾಗವಹಿಸಿದ್ದರು. ನಮಾಜ್ ಬಳಿಕ ಸಾಮೂಹಿಕ ದರ್ಗಾ ಝಿಯಾರತ್ ದುವಾ ಮಜ್ಲೀಸ್ ನಡೆಯಿತು.
ಪೈಚಾರ್:
ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಹಬ್ಬದ ಅಂಗವಾಗಿ ಈದ್ ನಮಾಜ್ ಹಾಗೂ ಸಾಮೂಹಿಕ ದುವಾಸಂಗಮ ನಡೆಯಿತು.ಸ್ಥಳೀಯ ಮಸೀದಿ ಖತೀಬರಾದ ಮುನೀರ್ ಸಕಾಫಿ ವಿರಾಜಪೇಟೆ ನಮಾಜ್ ನೇತೃತ್ವ ವಹಿಸಿದ್ದರು.ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಶರೀಫ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಜಮಾಅತಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಕುಂಬರ್ಚೋಡು:
ಕುಂಬರ್ಚೋಡು ಮುಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಸ್ಥಳೀಯ ಮಸೀದಿ ಖತಿಬರಾದ
ಅಶ್ರಫ್ ಮುಸ್ಲಿಯಾರ್ ಖುತುಬಾ ನೆರವೇರಿಸಿ ಹಬ್ಬದ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಹಾಜಿ ಹನೀಫ್ ಕೆಎಂ,ಉಪಾಧ್ಯಕ್ಷ ಅಬ್ದುಲ್ ಕರೀಂ ಬಿಎಂ,ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ,ಅಬ್ದುಲ್ ಖಾದರ್ ಹಾಜಿ,
ಹಾಗೂ ಜಮಾಯತಿನ ಎಲ್ಲಾ ಭಾಗವಹಿಸಿದ್ದರು.
ಸಂಪಾಜೆ:
ಸಂಪಾಜೆ ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸ್ಜಿದ್ ಇದರ ವತಿಯಿಂದ ಈದ್ ನಮಾಜ್ ಮಸೀದಿ ಸಮೀಪದ ಮೈದಾನದಲ್ಲಿ ನಡೆಯಿತು.ಈದ್ ಖುತುಬಾ ಮತ್ತು ನಮಾಜ್ ನೇತೃತ್ವವನ್ನು ಮೌಲವಿ ಸಲ್ಮಾನ್ ಖಾಸಿಮಿ ನಿರ್ವಹಿಸಿ ಈದ್ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಮಂದಿ ಜಮಾಅತ್ ಸದಸ್ಯರು ಭಾಗವಹಿಸಿದ್ದರು. ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬೆಳ್ಳಾರೆ:
ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಬಹು. , ಮುಹಮ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯಿತು. ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಸ್ಪರ ಈದ್ ಶುಭಾಶಯ ಕೋರಿದರು.
ಅರಂತೋಡು:
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ
ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜಮಾ ಅತ್ ಸರ್ವರೂ ಪಾಲ್ಗೊಂಡು ಪರಸ್ಪರ ಸ್ನೇಹ ಮಿಲನ ಮಾಡಿಕೊಂಡರು. ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ಈದ್ ಖುತುಬ ನಿರ್ವಹಿಸಿ ನಾಡಿನ ಸಮಸ್ತ ಜನರಿಗೆ ಈದ್ ಸಂದೇಶ ನೀಡಿದರು.ಜಮಾ ಅತ್ ನ ಸರ್ವ ಸದಸ್ಯರು ಪಾಲ್ಗೊಂಡಿದರು.