ಬೆಂಗಳೂರು:‘ಚಂದ್ರಯಾನ–3’ ನೌಕೆಯ ಲ್ಯಾಂಡರ್ ಘಟಕ ಚಂದ್ರನ ದಕ್ಷಿಣ ಧ್ರುವದ ಅಂಗಳಕ್ಕೆ ಸಾಫ್ಟ್ ಲ್ಯಾಂಡಿಂಗ್ ಸಮಯವನ್ನು ಇಸ್ರೋ ತಿಳಿಸಿದೆ. ‘ಆಗಸ್ಟ್ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಲ್ಯಾಂಡರ್ ಇಳಿಯಲಿದೆ ಎಂದು ‘ಎಕ್ಸ್’ನಲ್ಲಿ (ಟ್ವಿಟ್ಟರ್) ಭಾರತೀಯ ಬಾಹ್ಯಾಕಾಶ
ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ‘ಚಂದ್ರಯಾನ–3’ ನೌಕೆಯ ಲ್ಯಾಂಡರ್ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ.ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಒಳಗೊಂಡಿರುವ ಈ ಘಟಕದ ಎರಡನೇ ಹಂತದ ‘ಡೀಬೂಸ್ಟ್’ (ಲ್ಯಾಂಡರ್ನ ವೇಗ ತಗ್ಗಿಸುವ ಪ್ರಕ್ರಿಯೆ) ಇಂದು ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೊ ಹೇಳಿದೆ. ವಿಕ್ರಮ್ ಲ್ಯಾಂಡರ್ ಚಂದ್ರನಿಗೆ 25 ಕಿ.ಮೀ ಸಮೀಪವಿರುವ ಬಿಂದು ಮತ್ತು ಚಂದ್ರನಿಂದ 134 ಕಿ.ಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತದೆ ಎಂದು ಇಸ್ರೊ ಹೇಳಿದೆ.