ಸುಳ್ಯ:ಸುಳ್ಯ ದಸರಾ – 2024 ಕಾರ್ಯಕ್ರಮ ಆಯೋಜನೆ ಮತ್ತು ಜು. 28ರಂದು ಆದಿತ್ಯವಾರ ಕೇರ್ಪಳ ಬೂಡು ಗದ್ದೆಯಲ್ಲಿ ಶಾರದಾಂಬಾ ಸಮೂಹ ಸಮಿತಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಕೆಸರುಗದ್ದೆ ದಸರಾ ಕ್ರೀಡೋತ್ಸವ -2024 ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ಶ್ರೀ ಶಾರದಾಂಬಾ ಸಮೂಹ ಸಮಿತಿಗಳ ಜಂಟಿ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾರದಾಂಬ ಉತ್ಸವಸಮಿತಿಯ
ಅಧ್ಯಕ್ಷರಾದ ಡಾ. ಲೀಲಾಧರ್ ಅಧ್ಯಕ್ಷತೆ ವಹಿಸಿದ್ದರು. ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಗೌರವ ಸಲಹೆಗಾರರಾದ ಎನ್. ಜಯಪ್ರಕಾಶ್ ರೈ, ಎನ್ ಎ ರಾಮಚಂದ್ರ, ಎಂ ವೆಂಕಪ್ಪ ಗೌಡ, ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ದಾಸ್ ಸುಳ್ಯ, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಶರದಾಂಬಾ ಸೇವಾ ಸಮಿತಿ ಖಜಾಂಜಿ ಅಶೋಕ್ ಪ್ರಭು, ಉಪಾಧ್ಯಕ್ಷೆ ಯಶೋಧ ರಾಮಚಂದ್ರ, ಮಹಿಳಾ ಸಮಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಶರದಾಂಬಾ ಟ್ರಸ್ಟ್ ಕಾರ್ಯದರ್ಶಿ ಎಂ ಕೆ ಸತೀಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೀಡಾ ಸಂಯೋಜಕರಾದ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ ದಸರಾ ಕೆಸರು ಗದ್ದೆ ಕ್ರೀಡೋತ್ಸವದ ಮಾಹಿತಿ ನೀಡಿದರು. ಲೋಕೇಶ್ ಊರುಬೈಲು ಮಕ್ಕಳ ದಸರಾ ನಡೆಸುವ ಬಗ್ಗೆ ಸಲಹೆ ನೀಡಿದರು. ಪ್ರದಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು. ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ ವಂದಿಸಿದರು.
ಈ ಸಭೆಯಲ್ಲಿ ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.