ಸುಳ್ಯ: ಮುಂದಿನ ತಿಂಗಳು ದೀಪಾವಳಿ ಸಂಬಂಧ ಪಟಾಕಿ ಅಂಗಡಿಗಳು ತೆರೆದು ಪಟಾಕಿ ಮಾರಾಟ ಮಾಡುವುದಕ್ಕೆ ಲೈಸೆನ್ಸ್ ನೀಡುವುದಕ್ಕೆ ಸಂಬಂಧಪಟ್ಟು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಮುಖಂಡರು ತಹಶೀಲ್ದಾರ್ ಎಂ.ಮಂಜುನಾಥ್ ಅವರ ಜೊತೆ ಚರ್ಚೆ ನಡೆಸಿದರು. ತಾಲೂಕು ಕಚೇರಿಗೆ ಆಗಮಿಸಿದ ಶಾಸಕರು ಹಾಗೂ ಪ್ರಮುಖರು ಈ ಸಂಬಂಧ ಚರ್ಚೆ ನಡೆಸಿದರು. ಇದೀಗ ಪಟಾಕಿ
ಶೇಖರಣೆ, ಮಾರಾಟ ಸಂಬಂಧಿಸಿ ಸರಕಾರ ಕಾನೂನು ಕಠಿಣ ಮಾಡಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನಲ್ಲಿ ಸ್ಪಷ್ಟವಾದ ಮಾರ್ಗಸೂಚಿ ನೀಡಿ ಲೈಸೆನ್ಸ್ ನೀಡುವುದಕ್ಕೆ ಸಂಬಂಧಪಟ್ಟು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹಾಗೂ ಪ್ರಮುಖರು ಹೇಳಿದರು. ಸುಳ್ಯ ನಗರದಲ್ಲಿ ವಿಶಾಲವಾದ ಸ್ಥಳ ಇರುವಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಸ್ಥಳ ಗುರುತಿಸಿ ಪಟಾಕಿ ಅಂಗಡಿ ಮಾಡಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯಿತು. ಪಟಾಕಿ ಅಂಗಡಿಗೆ ಲೈಸೆನ್ಸ್ ನೀಡಲು ಸರಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಂ.ಮಂಜುನಾಥ್ ತಿಳಿಸಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಮಹೇಶ್ ಕುಮಾರ್ ರೈ ಮೇನಾಲ, ವಿನಯಕುಮಾರ್ ಕಂದಡ್ಕ, ಶ್ರೀನಾಥ್ ಬಾಳಿಲ, ದಿನೇಶ್ ಅಡ್ಕಾರ್, ಬೂಡು ರಾಧಾಕೃಷ್ಣ ರೈ, ಪದ್ಮನಾಭ ಬೀಡು, ರವಿಚಂದ್ರ ಕೊಡಿಯಾಲಬೈಲು, ಅಜಿತ್ ರಾವ್ ಕಿಲಂಗೋಡಿ ಮತ್ತಿತರರು ಉಪಸ್ಥಿತರಿದ್ದರು.