ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ 43.3 ಓವರ್ಗಳಲ್ಲಿ 209 ರನ್ ಗೆ ಆಲೌಟ್ ಆಗಿದೆ.ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತು.ಲಂಕಾದ ಆರಂಭಿಕ ಬ್ಯಾಟರ್ಸ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ಗೆ ಪತುಮ್ ನಿಸಂಕಾ ಹಾಗೂ
ಕುಶಾಲ್ ಪರೇರಾ ಆಸೀಸ್ ಪತನ ಕ್ಕೆ 125 ರನ್ ಜೊತೆಯಾಟ ಕಟ್ಟಿದರು. ಪತುಮ್ ನಿಸಂಕಾ 8 ಬೌಂಡರಿ ಸಹಿತ 61 ರನ್ ಗಳಿಸಿದರೆ ಕುಶಾಲ್ ಪರೇರಾ 12 ಬೌಂಡರಿ ಸಹಿತ 78 ರನ್ ಅರ್ಧಶತಕ ಬಾರಿಸಿದರು.ಬಳಿಕ
ಆಸ್ಟ್ರೇಲಿಯ ಬೌಲಿಂಗ್ ಎದುರು ನಿಲ್ಲಲಾಗದೆ ಲಂಕಾ ಕುಸಿಯಿತು.ಕುಶಾಲ್ ಮೆಂಡಿಸ್ 9, ಸದೀರ ವಿಕ್ರಮ 8 ಧನಂಜಯ್ ಡಿಸಿಲ್ವ 7, ಚಮಿಕಾ ಕರುಣರತ್ನೆ 2, ದುಣಿತ್ ವೆಲ್ಲಾಲಗೆ 2, ಮಹೇಶ ತೀಕ್ಷಣ ಶೂನ್ಯ, ಲಹಿರು ಕುಮಾರ 4, ಚರಿತ್ ಹಸಲಂಕ 25 ರನ್ ಗಳಿಸಿದರು. ಆಸ್ಟ್ರೇಲಿಯ ಪರ ಆಡಂ ಝಾಂಪ 4 ವಿಕೆಟ್ ಕಬಳಿಸಿದರೆ,ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ತಲಾ 2, ಗ್ಲೆನ್ ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದರು.