ಕೊಚ್ಚಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಘ ಕೊಚ್ಚಿನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೇರಳದ ಕೊಚ್ಚಿನ್ ನಗರಸಭೆಯ
ಪುರ ಭವನದಲ್ಲಿ ನಡೆದ ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವದ ಗೋಷ್ಠಿಯಲ್ಲಿ ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ಆಹ್ವಾನಿತರಾಗಿ ಪಾಲ್ಗೊಂಡರು.ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕೊಚ್ಚಿನ್ ಮೇಯರ್ ವಿಜಯಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಹಿತ ಕರ್ನಾಟಕ, ಕೇರಳದ ಸಚಿವರು, ಶಾಸಕರು, ಕಲಾವಿದರು, ಪತ್ರಕರ್ತರು, ಸಾಹಿತ್ಯ, ಸಂಸ್ಕೃತಿ ಸಂಘಟನೆಗಳ ಪದಾಧಿಕಾರಿಗಳು ದಿನ ಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.