ಸುಳ್ಯ:ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಲ್ಪನೆಯಡಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಮತಯಾಚನೆ ಮಾಡಿದ ಬಳಿಕ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.ಜಿಲ್ಲೆಯಲ್ಲಿ
ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿ ಮಾಡುವುದು ಗುರಿ, ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಮುಖರು ಸೇರಿ ಸ್ವಾಗತಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಹರೀಶ್ ಕಂಜಿಪಿಲಿ,ಎಸ್.ಎನ್.ಮನ್ಮಥ, ರವೀಂದ್ರ ಶೆಟ್ಟಿ ಉಳಿದೊಟ್ಟು, ಎನ್.ಎ.ರಾಮಚಂದ್ರ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಸುಬೋದ್ ಶೆಟ್ಟಿ ಮೆನಾಲ ವಿನಯ ಕುಮಾರ್ ಕಂದಡ್ಕ, ಸಂತೋಷ್ ಜಾಕೆ, ವಿನಯಕುಮಾರ್ ಮುಳುಗಾಡು, ಸುಭದಾ ರೈ, ಸುನಿಲ್ ಕೇರ್ಪಳ, ದುರ್ಗೇಶ್ ಪಾರೆಪ್ಪಾಡಿ, ಪ್ರಸಾದ್ ಕಾಟೂರು, ಮನುದೇವ್ ಪರಮಲೆ, ಎಂ.ಆರ್.ಶ್ರೀಕೃಷ್ಣ, ಶ್ರೀಕಾಂತ್ ಮಾವಿನಕಟ್ಟೆ,ಸತೀಶ್ ಕೆಮನಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್, ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಮುಖರಾದ ಯಶೋಧಾ ರಾಮಚಂದ್ರ, ಚಿದಾನಂದ ಬಾಳಿಲ, ಬಿ.ಟಿ.ಮಾಧವ, ಭವಾನಿಶಂಕರ ಅಡ್ತಲೆ,ನಾಗೇಶ್ ಕೊಚ್ಚಿ, ಕಮಲಾಕ್ಷ ನಂಗಾರು ಮತ್ತಿತರರು ಉಪಸ್ಥಿತರಿದ್ದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಬ್ರಿಜೇಶ್ ಚೌಟರನ್ನು ಸನ್ಮಾನಿಸಲಾಯಿತು.