ಸುಳ್ಯ:ಸಮಾಜದಲ್ಲಿ ವಕೀಲರಿಗೆ ತನ್ನದೇ ಆದ ಗೌರವ ಹಾಗೂ ಆದ್ಯತೆ ಇದೆ. ದೇಶದ ಕಾನೂನು ಮತ್ತು ಸಂವಿಧಾನ ಹಾಗೂ
ಜನರ ಮತ್ರು ಸಮಾಜದ ಸಮಸ್ಯೆಗಳನ್ನು ಅರಿತಿರುವ ವಕೀಲರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಮಹತ್ವದ್ದು ಎಂದು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಅವರು ಬಿಜೆಪಿ ಸುಳ್ಯ ಮಂಡಲ ಕಛೇರಿಯಲ್ಲಿ ನಡೆದ
ವಕೀಲದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ಎಲ್ಲಾ ವರ್ಗದ ಜನರ ಅಭಿಪ್ರಾಯ ಪಡೆದು ಜಿಲ್ಲೆಯ ಅಭಿವೃದ್ಧಿಗಾಗಿ ದೂರದೃಷ್ಟಿಯ ವಿಕಸಿತ ದ.ಕ. ಜಿಲ್ಲೆ ಕಲ್ಪನೆಯ ಯೋಜನೆ ಮಾಡಲಾಗುವುದು. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುವ ಗುರಿ ನನ್ನದಾಗಿದ್ದು, ಭಾರತದ ಮಾಡೆಲ್ ಅಭಿವೃದ್ಧಿಯನ್ನು ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ಮೋದಿ ರಾಷ್ಟ್ರವನ್ನು ಸರಿ ದಿಕ್ಕಿಗೆ ತಂದಿದ್ದಾರೆ ಎಂದರು.
ವಕೀಲದ ಸಂಘದ ಅಧ್ಯಕ್ಷ ನಾರಾಯಣ ಕೆ. ಮಾತನಾಡಿರು. ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರಧ್ವಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ರವೀಂದ್ರ ಶೆಟ್ಟಿ ಉಳಿದೊಟ್ಟು, ಹರೀಶ್ ಕಂಜಿಪಿಲಿ, ದಿಲೀಪ್ ಬಾಬ್ಲುಬೆಟ್ಟು, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಸುಬೋದ್ ಶೆಟ್ಟಿ ಮೆನಾಲ ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ,ಎ.ಟಿ.ಕುಸುಮಾಧರ, ರಾಕೇಶ್ ಕುಂಠಿಕಾನ, ಸಂತೋಷ್ ಜಾಕೆ, ವಿನಯಕುಮಾರ್ ಮುಳುಗಾಡು, ಸುನಿಲ್ ಕೇರ್ಪಳ, ಸುಭದಾ ರೈ, ದುರ್ಗೇಶ್ ಪಾರೆಪ್ಪಾಡಿ, ಪ್ರಸಾದ್ ಕಾಟೂರು, ಮನುದೇವ್ ಪರಮಲೆ, ಎಂ.ಆರ್.ಶ್ರೀಕೃಷ್ಣ, ಶ್ರೀಕಾಂತ್ ಮಾವಿನಕಟ್ಟೆ,ಸತೀಶ್ ಕೆಮನಬಳ್ಳಿ ಹರೀಶ್ ಬೂಡುಪನ್ನೆ,ಮತ್ತಿತರರು ಉಪಸ್ಥಿತರಿದ್ದರು.