ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ. ಕಿರಣ್ ಕುಮಾರ್ ನಿರ್ದೇಶಿಸಿದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಗೆ ಇದು ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿದೆ. 2022ನೇ ಸಾಲಿನಲ್ಲಿ ಬಿಡುಗಡೆಯಾದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರಕ್ಕೆ ಅತ್ಯುತ್ತಮ
ಚಲನಚಿತ್ರ ಪ್ರಶಸ್ತಿ ದೊರೆತಿದೆ. ‘ಗಂಗೂಬಾಯಿ ಕಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ಪುಷ್ಪ’ ಚಿತ್ರದ ನಟನೆಗೆ ಅಲ್ಲು ಅರ್ಜುನ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ನೃತ್ಯ ನಿರ್ದೇಶನ, ಸಾಹಸ ನಿರ್ದೇಶನ ಮತ್ತು ಉತ್ತಮ ಎಫೆಕ್ಟ್ ವಿಭಾಗದಲ್ಲಿ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಆಯ್ಕೆಯಾಗಿದೆ.ಅತ್ಯುತ್ತಮ ಸಾಕ್ಷ್ಯ ಚಿತ್ರ: ಏಕ್ ಥಾ ಗಾಂವ್, ಅತ್ಯುತ್ತಮ ಮನರಂಜನಾ ಚಿತ್ರ: ಆರ್ಆರ್ಆರ್ (ತೆಲುಗು)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ) ಮತ್ತು ಕೃತಿ ಸಸೋನ್ (ಮಿಮಿ),ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
ನರ್ಗೀಸ್ ದತ್ ಪ್ರಶಸ್ತಿ (ರಾಷ್ಟ್ರೀಯ ಏಕೀಕರಣ): ದಿ ಕಾಶ್ಮೀರ್ ಫೈಲ್ಸ್, ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ), ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ ಫೈಲ್ಸ್),ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪಾ), ಅತ್ಯುತ್ತಮ ಕನ್ನಡ ಚಿತ್ರ :777 ಚಾರ್ಲಿ, ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವ್ಯವಸಾಯಿ,
ಅತ್ಯುತ್ತಮ ಮಲಯಾಳಂ ಚಿತ್ರ: ಹೋಮ್, ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್,ಅತ್ಯುತ್ತಮ ಗಾಯಕ ಪ್ರಶಸ್ತಿ ಕಾಲ ಭೈರವ ಪಡೆದುಕೊಂಡಿದ್ದಾರೆ.