ಸುಳ್ಯ:ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಉನ್ನತ ವ್ಯಾಸಾಂಗಕ್ಕೆ ಸ್ಕಾಲರ್ಶಿಫ್ ಹಸ್ತಾಂತರ ಕಾರ್ಯಕ್ರಮ ಕ್ಯಾಂಪ್ಕೋ ಸಂಸ್ಥೆಯ ನಿಂತಿಕಲ್ ಶಾಖೆಯಲ್ಲಿ ನಡೆಯಿತು.ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಯ ಹೊಸ ನಿರ್ಧಾರದಂತೆ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರು ಕೃಷಿ ವಿಜ್ಞಾನಕ್ಕೆ ಸಂಬಂಧಿಸಿ
ಉನ್ನತ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿ ಸ್ಕಾಲರ್ಶಿಪ್ ನೀಡಲು ನಿರ್ಧರಿಸಲಾಗಿದೆ. ಇದರ ಅನ್ವಯ ಕೃಷಿ ವಿಜ್ಞಾನದಲ್ಲಿ ಎಂಎಸ್ಸಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ಕ್ಯಾoಪ್ಕೋ ಸಂಸ್ಥೆಯ ನಿಂತಿಕಲ್ ಶಾಖೆಯ ಸಕ್ರಿಯ ಸದಸ್ಯರಾದ ಲಕ್ಷ್ಮಿನಾರಾಯಣ ನಡ್ಕ ಅವರ ಪುತ್ರಿ ಅವರು ಆಯ್ಕೆಯಾಗಿದ್ದಾರೆ.
ಪ್ರಥಮ ಕಂತಿನ ಐವತ್ತು ಸಾವಿರ ರೂಪಾಯಿ ಚೆಕ್ಕನ್ನು ಕ್ಯಾಂಪ್ಕೋ ನಿಂತಿಕಲ್ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಅಚರು ಲಕ್ಸ್ಮಿನಾರಾಯಣ ನಡ್ಕ ಅವರಿಗೆ ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಪ್ರಬಂಧಕರಾ ದ ಜಯರಾಮ್ ಶೆಟ್ಟಿ, ನಿಂತಿಕಲ್ ಶಾಖಾ ಪ್ರಬಂಧಕರಾದ ರಮೇಶ್. ಡಿ. ಹಾಗೂ ಸಿಬ್ಬಂದಿ ರಮೇಶ್ ಕುಮಾರ್ ವಿ. ಮತ್ತು ಕಾಳುಮೆಣಸು ವಿಭಾಗದ ನಿತಿನ್ ಕೋಟ್ಯಾನ್ ಉಪಸ್ಥಿತರಿದ್ದರು.